ವೀರಾಜಪೇಟೆ, ಆ.2: ಗ್ರಾಮೀಣ ಪ್ರದೇಶದಲ್ಲಿ ಆಗಿಂದಾಗ್ಗೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುವದರಿಂದ ಜನರಿಗೆ ಸೋಲಾರ್ ಲೈಟ್‍ನ ಅವಶ್ಯಕತೆ ಮುಖ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಹೇಳಿದರು.

ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವೀರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದ ರಾಮನಗರದ ಅಯ್ಯಪ್ಪ ದೇವಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಯೋಜನೆಯ ಸದಸ್ಯರಿಗೆ ಸೋಲಾರ್ ಲೈಟ್ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಹೇಶ್ ಗಣಪತಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಮಳೆಗಾಲ, ಬೇಸಿಗೆ ಎನ್ನದೆ ವಿದ್ಯುತ್ ಕಡಿತಗೊಳ್ಳುತ್ತಿರುವದರಿಂದ ಜನರು ಕತ್ತಲೆಯಲ್ಲಿಯೇ ಕಾಲ ಕಳೆಯು ವಂತಾಗಿತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ಸೋಲಾರ್ ಲೈಟ್ ನೀಡುತ್ತಿರುವದು ಉತ್ತಮ ಕಾರ್ಯ; ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತಾಗಲಿ ಎಂದರು. ಮುಂದೆಯೂ ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಸವಲತ್ತುಗಳು ದೊರಕಲಿ; ಇದರಿಂದ ರೈತರು, ಕಾರ್ಮಿಕರು, ಸಾರ್ವಜನಿಕರಿಗೂ ಅನುಕೂಲವಾಗಲಿದೆ ಎಂದರು.

ಮಡಿಕೇರಿ ಮತ್ತು ವೀರಾಜಪೇಟೆ ಯೋಜನಾಧಿಕಾರಿ ಸದಾಶಿವ ಗೌಡ ಅವರು ಮತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಾಜ್ಯದ 36 ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ವರ್ಷದಲ್ಲಿ 30 ರಿಂದ 40 ಮುಖ್ಯವಾದ ಕಾರ್ಯಕ್ರಮಗಳು, 150ಕ್ಕೂ ಹೆಚ್ಚು ಇತರ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಯೋಜನೆಯಲ್ಲಿ ಕತ್ತಲಿಂದ ಬೆಳಕಿನೆಡೆಗೆ ಎಂಬಂತೆ 200 ಘಟಕಗಳ ಸದಸ್ಯರಿಗೆ ಸೋಲಾರ್ ಲೈಟ್ ವಿತರಣಾ ಕಾರ್ಯವನ್ನು ಹಮ್ಮಿಕೊಂಡಿದ್ದು ಈಗಾಗಲೇ ವೀರಾಜಪೇಟೆ ವಲಯದಲ್ಲಿ 216 ಹೆಗ್ಗಳ ರಾಮನಗರದಲ್ಲಿ 43 ಸೋಲಾರ್ ಲೈಟ್ ವಿತರಿಸಲಾಗುತ್ತಿದೆ ಸದಸ್ಯರು ಪಡೆದುಕೊಳ್ಳುವ ಸೋಲಾರ್‍ನ್ನು ಉತ್ತಮವಾಗಿ ಬಳಸಿಕೊಳ್ಳುವಂತಾಗ ಬೇಕು ಎಂದರು.

ಸೆಲ್ಕೋ ಸೋಲಾರ್ ಬ್ರಾಂಚ್ ಮ್ಯಾನೇಜರ್ ಸದಾಶಿವ ಪ್ರಾಸ್ತಾವಿಕ ವಾಗಿ ಮಾತನಾಡಿ, 24 ವರ್ಷ ಗಳಿಂದಲೂ ಸೋಲಾರ್ ವಿತರಿಸಿ ಕೊಂಡು ಬರುತ್ತಿದ್ದು, ಇದರಿಂದ ಜನರಿಗೆ ಅನುಕೂಲ ವಾಗಲಿದೆ ಎಂದು ಹೇಳಿದರು. ಸೆಲ್ಕೋ ಸೋಲಾರ್‍ನ ಹಿರಿಯ ವ್ಯವಸ್ಥಾಪಕ ರಾಧಾಕೃಷ್ಣ ಮಾತನಾಡಿ, ಸೋಲಾರ್‍ನಿಂದ ಹೊಗೆ ಕಡಿಮೆ ಮಾಡಿ ಪರಿಸರ ಉಳಿಸ ಬಹುದು ಹಾಗೂ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು. ಈ ಸಂದರ್ಭ ಸೋಲಾರ್ ಮಾರುಕಟ್ಟೆ ಅಧಿಕಾರಿ ಗಣೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೆಗ್ಗಳ ಒಕ್ಕೂಟದ ಅಧ್ಯಕ್ಷೆ ಲಕ್ಷ್ಮಿ, ಅಯ್ಯಪ್ಪ ದೇವಾಲಯದ ಆಡಳಿತ ಮಂಡಳಿಯ ರಕ್ಷಿತಾ, ಒಕ್ಕೂಟದ ಸುಮನ ಅವರುಗಳು ಸಭೆಯನ್ನು ದ್ದೇಶಿಸಿ ಮಾತನಾಡಿದರು. ಯೋಜನೆಯ ಹೆಗ್ಗಳ ಒಕ್ಕೂಟದ ಸೇವಾ ಪ್ರತಿನಿಧಿ ಬಿ.ಎಂ.ಜ್ಯೋತಿ ಸ್ವಾಗತಿಸಿದರು. ಮೇಲ್ವಿಚಾರಕ ರವೀಂದ್ರ ಹಾಗೂ ಸರಿತಾ ನಿರೂಪಿಸಿದರೆ ಸೇವಾ ಪ್ರತಿನಿಧಿ ಪುಷ್ಪ ವಂದಿಸಿದರು. ಕಾರ್ಯಕ್ರಮದಲ್ಲಿ 38 ತಂಡದ ಸದಸ್ಯರುಗಳು ಭಾಗವಹಿಸಿದ್ದರು.