ನಾಪೆÇೀಕ್ಲು, ಆ. 2: ನಾಪೆÇೀಕ್ಲು ನಾಡ್ ಕೊಡವ ಸೌಹಾರ್ದ ಕ್ರೇಡಿಟ್ ಕೋ-ಆಪರೇಟಿವ್ ಸೊಸೈಟಿಯ ಪೂರ್ವಭಾವಿ ಸಭೆ ನಾಪೆÇೀಕ್ಲು ಕೊಡವ ಸಮಾಜದಲ್ಲಿ ಸಮಾಜದ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕೊಡವ ಸೌಹಾರ್ದ ಸಂಘವನ್ನು ಈಗಾಗಲೇ ನೋಂದಣಿ ಮಾಡಲಾಗಿದ್ದು, ಸಭೆಯಲ್ಲಿ ನೂತನ ಆಡಳಿತ ಮಂಡಳಿಯನ್ನು ನೇಮಕ ಮಾಡಲಾಗಿ, ಸಮಿತಿಯ ನೂತನ ಅಧ್ಯಕ್ಷರಾಗಿ ಅಪ್ಪಾರಂಡ ಸುಧೀರ್ ಅಯ್ಯಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಮಂಡೀರ ರಾಜಪ್ಪ, ಸಮಿತಿ ಸದಸ್ಯರಾಗಿ ಚೇನಂಡ ಗಿರೀಶ್, ಚೋಕಿರ ಸಜಿತ್, ಕನ್ನಂಬೀರ ಸುಧಿ ತಿಮ್ಮಯ್ಯ, ಕಾಟುಮಣಿಯಂಡ ಉಮೇಶ್, ಮುಕ್ಕಾಟಿರ ವಿನಯ್, ಕುಲ್ಲೇಟಿರ ಅಜಿತ್ ನಾಣಯ್ಯ, ಕೋಟೆರ ನೈಲಾ ಚಂಗಪ್ಪ, ಮೂವೇರ ರೇಖಾ ಪ್ರಕಾಶ್, ಬೊಳ್ಳಿಯಂಡ ಹರೀಶ್, ಮಾಳೆಯಂಡ ಅಯ್ಯಪ್ಪ, ಕುಂಡ್ಯೋಳಂಡ ವಿಶು ಪೂವಯ್ಯ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭ ಕೊಡವ ಸಮಾಜದ ವ್ಯವಸ್ಥಾಪಕ ಶಿವಚಾಳಿಯಂಡ ಜಗದೀಶ್, ಕುಲ್ಲೇಟಿರ ಹೇಮಾ, ಚಿಯಕಪೂವಂಡ ಸಚಿನ್ ಇದ್ದರು.
ಸಂಸ್ಥೆಯ ನೋಂದಾಯಿತ ಕಚೇರಿ ಕೊಡವ ಸಮಾಜದ ಕಟ್ಟಡದಲ್ಲಿ ಆರಂಭಗೊಳ್ಳಲಿದ್ದು ಉದ್ಘಾಟನೆ ಮುಂದಿನ ದಿನಗಳಲ್ಲಿ ನಡೆಯಲಿದೆ. ಸದಸ್ಯತ್ವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಸದಸ್ಯತ್ವ ಬಯಸುವವರು ಅಧ್ಯಕ್ಷರು, ಆಡಳಿತ ಮಂಡಳಿಯನ್ನು ಸಂಪರ್ಕಿಸಲು ಕೋರಲಾಗಿದೆ.