ಮಡಿಕೇರಿ, ಆ. 2: ಮಡಿಕೇರಿ ನಗರಸಭೆಯ ಆಯುಕ್ತರಾಗಿ ಕಳೆದ ಒಂದು ವರ್ಷ 9 ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿರುವ ಬಿ. ಶುಭ ಅವರು, ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ತವರು ಜಿಲ್ಲೆಯ ರಾಮನಗರ ನಗರಸಭೆ ಆಯುಕ್ತರಾಗಿ ವರ್ಗಾವಣೆಗೊಂಡಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ಗೊತ್ತಾಗಿದೆ.

ಮಡಿಕೇರಿ ನಗರಸಭೆಯಲ್ಲಿ ಕಾನೂನಾತ್ಮಕ ಕಾರ್ಯನಿರ್ವಹಣೆಗೆ ಆದ್ಯತೆಯೊಂದಿಗೆ, ಆಡಳಿತಾತ್ಮಕ ಸುಧಾರಣಾ ಕ್ರಮಗಳನ್ನು ತರುವಲ್ಲಿ ಗಮನ ಸೆಳೆದಿರುವ ಶುಭ ವರ್ಗಾವಣೆಯ ಸುಳಿವು ಲಭಿಸಿದ್ದು, ತೆರವುಗೊಳ್ಳಲಿರುವ ಸ್ಥಾನಕ್ಕೆ ಯಾರು ನಿಯೋಜನೆಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ. ಈ ಬಗ್ಗೆ ‘ಶಕ್ತಿ’ ಸಂಪರ್ಕಿಸಲಾಗಿ ಅವರು ಪ್ರತಿಕ್ರಿಯೆಗೆ ಲಭಿಸಿಲ್ಲ.