ಸುಂಟಿಕೊಪ್ಪ, ಜು. 29: ಕುಡಿಯಲು ನೀರಿಲ್ಲ ವಿದ್ಯುತ್ ಇಲ್ಲದೆ 2 ತಿಂಗಳಿನಿಂದ ಕತ್ತಲೆಯಿಂದ ಕೂಡಿದ ಗ್ರಾಮವಾಗಿದೆ. ದುಡಿಯುವ ಕೈಗಳಿಗೆ ಕೆಲಸವಿಲ್ಲ ಇದು ಕುಗ್ರಾಮ ಬೆಟ್ಟ ಪ್ರದೇಶದ ಕಥೆ ವ್ಯಥೆಯಲ್ಲ ಸೋಮವಾರಪೇಟೆ ತಾಲೂಕು ಕೇಂದ್ರದಿಂದ 9 ಕೀ ಮೀ ದೂರದ ಕಾಜೂರು ಗ್ರಾಮದ ಜನರ ಬವಣೆಯಾಗಿದೆ.

ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಐಗೂರು ಗ್ರಾಮದಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ 1 ತಿಂಗಳು ಕಳೆದಿದೆ. ಕುಡಿಯುವ ನೀರು ಲಭಿಸದೆ 2 ತಿಂಗಳು ಕಳೆದರೂ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ನಿದ್ರಾವಸ್ಥೆಯಲ್ಲಿದೆ. ಜಿಲ್ಲಾ ಪಂಚಾಯಿತಿ ಸದಸ್ಯರಾದ ಗೋಪಾಲ ಪೂರ್ಣಿಮ ಅವರು ಐಗೂರು ಗ್ರಾಮವನ್ನು ಮರೆತಂತಿದೆ ಎಂದು ಗ್ರಾಮಸ್ಥರು ಆಕ್ಷೇಪಿಸಿದ್ದಾರೆ.

ತಾ.ಪಂ. ಸದಸ್ಯರಾದ ಸಬಿತ ಚೆನ್ನಕೇಶವ ಅವರ ಪ್ರಯತ್ನ, ಸೆಸ್ಕ್, ಜಿ.ಪಂ. ಅಧಿಕಾರಿಗಳ ಸಹಕಾರವಿಲ್ಲದೆ ಅರಣ್ಯ ರೋದನವಾಗಿದೆ. ಕಾಜೂರು ಚೆಟ್ಟಿಯಾರ್ ಕಾಫಿ ತೋಟದಲ್ಲಿ ಭಾರೀ ಗಾಳಿಮಳೆಗೆ 6 ವಿದ್ಯುತ್ ಕಂಬ ಬಿದ್ದು ತಂತಿ ತುಂಡಾಗಿದ್ದರಿಂದ ಈ ವಿಭಾಗದಲ್ಲಿ ವಿದ್ಯುತ್ ಅಲಭ್ಯವಾಗಿದೆ.

ಕುಡಿಯುವ ನೀರಿಲ್ಲದೆ ಗ್ರಾಮಸ್ಥರು ಮಳೆ ನೀರನ್ನೇ ಅವಲಂಬಿಸುವಂತಾಗಿದೆ. ಗ್ರಾಮಸ್ಥರು ಸೇರಿ ವಿದ್ಯುತ್ ಕಂಬ ಹಾಕÀÀಲು ತಂತಿ ಎಳೆಯಲು ಮುಂದಾದರೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳ ಲೈನ್ ಮೆನ್‍ಗಳ ನಿರಾಸಕ್ತಿಯಿಂದ ಆ ಕೆಲಸವು ನೆನೆಗುದಿಗೆ ಬಿದ್ದಿದೆ. ಕಾರ್ಮಿಕರಿಗೆ ತೋಟದಲ್ಲಿ ಕೆಲಸವು ಸಿಗುತ್ತಿಲ್ಲ ಪ್ರಕೃತಿ ವಿಕೋಪ ಯೋಜನೆಯಲ್ಲಿ ಹಣದ ಕೊರತೆ ಯಿಲ್ಲ ಜಿಲ್ಲಾಧಿಕಾರಿ ಖಾತೆಯಲ್ಲಿ ಹಣವಿದೆ ಸಂತ್ರಸ್ಥರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರಾಜ್ಯದ ಮುಖ್ಯ ಮಂತ್ರಿ ಕುಮಾರಸ್ವಾಮಿ ಪಿಡಬ್ಲುಡಿ ಮಂತ್ರಿ ಹೆಚ್.ಡಿ. ರೇವಣ್ಣ ಹಾಗೂ ಕಂದಾಯ ಸಚಿವರು ಆರ್.ವಿ. ದೇಶಪಾಂಡೆ ಕೊಡಗಿಗೆ ಬಂದಾಗ ಹೇಳಿಕೆ ನೀಡಿದ್ದರು. ಆದರೆ ರಾಜ್ಯದ ದೊರೆ ಮಂತ್ರಿಗಳ ಮಾತಿಗೂ ಬೆಲೆ ಇಲ್ಲದಂತಾಗಿದೆ.

ಗ್ರಾಮ ಪಂಚಾಯಿತಿಯವರು ಕುಡಿಯುವ ನೀರಿಗೂ ರಾಜಕೀಯ ಬೆರೆಸುತ್ತಿದ್ದಾರೆ. ಕುಡಿಯುವ ನೀರು ವಿದ್ಯುತ್ 3 ದಿನಗಳಲ್ಲಿ ದೊರಕಿಸಿ ಕೊಡದಿದ್ದಲ್ಲಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವದಾಗಿ ಗ್ರಾಮಸ್ಥರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.