ಮಡಿಕೇರಿ, ಜು. 28: ಇಲ್ಲಿಗೆ ಸಮೀಪದ ಕರವಾಲೆ ಬಾಡಗ ಗ್ರಾಮದಲ್ಲಿ ಇಂದು ಬೆಳ್ಳಂಬೆಳಿಗ್ಗೆ ವೃದ್ಧೆಯೊಬ್ಬರು ವಿದ್ಯುತ್ ತಂತಿ ಸ್ಪರ್ಶಗೊಂಡು ಮೃತರಾಗಿರುವ ದುರ್ಘಟನೆ ಸಂಭವಿಸಿದೆ. ಅರೆಯಂಡ ದಿ. ಅಯ್ಯಣ್ಣ ಎಂಬವರ ಪತ್ನಿ ಮಾಚಮ್ಮ (77) ಎಂಬವರೇ ಮೃತೆ ದುರ್ದೈವಿ.ಇಂದು ಬೆಳಿಗ್ಗೆ 8.30ರ ಸುಮಾರಿಗೆ ಪಕ್ಕದ ಮನೆಯತ್ತ ಹೋದಾಕೆ ಬಹಳ ಹೊತ್ತಾದರೂ ಹಿಂತಿರುಗಿರಲಿಲ್ಲವೆಂದು ತಿಳಿದು ಬಂದಿದೆ.ಅದೇ ಮಾರ್ಗದಲ್ಲಿ 9 ಗಂಟೆ ಸುಮಾರಿಗೆ ಪಕ್ಕದಲ್ಲೇ ಬಾಡಿಗೆ ಮನೆಯಲ್ಲಿರುವ ಕನಿಕೆ ಎಂಬವರು ಹೋಗುವಾಗ ವೃದ್ಧೆ ಮಾಚಮ್ಮ ಬಿದ್ದಿರುವದನ್ನು ಗಮನಿಸಿ, ಅಕ್ಕಪಕ್ಕದ ಜನರಿಗೆ ವಿಷಯ ತಿಳಿಸಿದ್ದಾರೆ. ಈ ಸಂದರ್ಭ ಹತ್ತಿರ ಹೋಗಿ ನೋಡಿದಾಗ ವಿದ್ಯುತ್ ಸ್ಪರ್ಶದಿಂದ ಮಾಚಮ್ಮ ಮೃತರಾಗಿರುವದು ಗೋಚರಿಸಿದೆ.
ಆ ಮೇರೆಗೆ ಮೃತರ ಪುತ್ರ ಸಂತು ನೀಡಿದ ಪುಕಾರಿನ ಅನ್ವಂiÀi ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ದೂರು ದಾಖಲಿಸಿಕೊಂಡು, ಮುಂದಿನ ಕ್ರಮಕೈಗೊಂಡಿದ್ದಾರೆ. ಘಟನೆ ಸ್ಥಳಕ್ಕೆ ಚೆಸ್ಕಾಂ ಸಿಬ್ಬಂದಿ ತೆರಳಿ ಪರಿಶೀಲಿಸಿದ್ದಾರೆ. ಮೃತರು ಇಬ್ಬರು ಪುತ್ರರೊಂದಿಗೆ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.