ಮಡಿಕೇರಿ, ಜು. 28: ನಗರದ ಎಫ್.ಎಂ.ಸಿ. ಕಾಲೇಜು ಹಿಂಭಾಗದ ನಿವಾಸಿ ಬಿ.ಡಿ. ಗಂಗಾಧರ್ (65) ಎಂಬವರು ತಾ. 19 ರಿಂದ ನಾಪತ್ತೆಯಾಗಿರುವದಾಗಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇಂದು ಈ ವ್ಯಕ್ತಿಯ ಶವ ಗರಗಂದೂರು ಬಳಿಯ ಹರದೂರು ಹೊಳೆಯಲ್ಲಿ ಗೋಚರಿಸಿದೆ. ಅಲ್ಲಿನ ತೋಟವೊಂದರ ಕಾರ್ಮಿಕರು ಶವದ ಬಗ್ಗೆ ತಿಳಿಸಿದ ಮೇರೆಗೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ ಸಂದರ್ಭ ಮೃತ ವ್ಯಕ್ತಿ ಗಂಗಾಧರ್ ಎಂದು ದೃಢಪಟ್ಟಿದೆ.
ಈ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ? ಅಥವಾ ಆಕಸ್ಮಿಕ ಸಾವು ಸಂಭವಿಸಿದ್ದಾಗಿದೆಯೇ ಎನ್ನುವ ಸಂಬಂಧ ಮರಣೋತ್ತರ ಪರೀಕ್ಷೆ ಬಳಿಕ ತಿಳಿಯಬೇಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.