ಗುಡ್ಡೆಹೊಸೂರು, ಜು. 28: ಇಲ್ಲಿಗೆ ಸಮೀಪದ ನಂಜರಾಯಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘವು 2017-18ನೇ ಸಾಲಿಗೆ ರೂ. 28.91 ಲಕ್ಷಗಳ ಲಾಭಗಳಿಸಿದೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ. ಸಂಘದ ವ್ಯಾಪ್ತಿಗೆ 9 ಗ್ರಾಮಗಳು ಸೇರಿದ್ದು, 1998 ಸದಸ್ಯರನ್ನು ಹೊಂದಿದ್ದು ಪಾಲು ಬಂಡವಾಳ ರೂ. 159.40 ಲಕ್ಷ ಹೊಂದಿದೆ. 2017-18ನೇ ಸಾಲಿಗೆ ರೂ. 115.37 ಕೋಟಿ ವಹಿವಾಟು ನಡೆಸಿರುವ ಸಂಘ 83.43 ಲಕ್ಷ ಕ್ಷೇಮ ನಿಧಿಯನ್ನು 155 ಲಕ್ಷ ಇತರ ನಿಧಿಯನ್ನು ಹೊಂದಿದೆ. ರೂ. 920.70 ಲಕ್ಷ ಕೆ.ಸಿ.ಸಿ. ಸಾಲವನ್ನು ರೂ. 105.81 ಲಕ್ಷ ಮಧ್ಯಮಾವದಿ ಸಾಲವನ್ನು ರೂ. 309.20 ಲಕ್ಷ ಜಾಮೀನು ಸಾಲವನ್ನು, ರೂ. 22.30 ಲಕ್ಷ ವಾಹನ ಸಾಲವನ್ನು ರೂ. 120 ಲಕ್ಷ ಇತರ ಸಾಲವನ್ನು ಅಲ್ಲದೆ ರೂ. 330 ಲಕ್ಷ ಆಭರಣ ಸಾಲವನ್ನು ಸಂಘದ ಸದಸ್ಯರಿಗೆ ನೀಡಿದೆ. ಸಂಘದ ವತಿಯಿಂದ 106 ಸ್ವಸಹಾಯ ಸಂಘಗಳನ್ನು ರಚಿಸಿ ಸಂಘದಿಂದ ರೂ. 85.15 ಲಕ್ಷ ಸಾಲವನ್ನು ನೀಡಲಾಗಿದೆ. ಈ ಎಲ್ಲಾ ಸಾಲಗಳನ್ನು ಸಂಘದ ಸ್ವಂತ ಹಣದಿಂದ ನೀಡಲಾಗಿದೆ. ಅಲ್ಲದೆ ಶೇ. 99.98 ರಷ್ಟು ಸಾಲ ವಸೂಲಾತಿಯಾಗಿರುತ್ತದೆ. ಸಂಘದ ವತಿಯಿಂದ ನಂಜರಾಯಪಟ್ಟಣ, ವಾಲ್ನೂರು ಮತ್ತು ಗುಡ್ಡೆಹೊಸೂರು ಗ್ರಾಮದಲ್ಲಿ ದಿನಸಿ ಶಾಖೆಗಳನ್ನು ಹೊಂದಿದ್ದು ಶಾಖೆಗಳ ಮೂಲಕ ರಸಗೊಬ್ಬರ, ಕೀಟನಾಶಕ, ಸಿಮೆಂಟ್, ಕೊಂಕಣ ಗ್ಯಾಸ್, ಮದ್ದುಗುಂಡುಗಳನ್ನು ಮಾರಾಟ ಮಾಡುತ್ತಿದ್ದು 2017-18 ನೇ ಸಾಲಿನಲ್ಲಿ ರೂ. 716.40 ಲಕ್ಷ ವ್ಯಾಪಾರ ವಹಿವಾಟು ನಡೆಸಿ ರೂ. 23.60 ಲಕ್ಷ ಲಾಭಗಳಿಸಿರುತ್ತದೆ. ಅಲ್ಲದೆ 3 ಶಾಖೆಗಳಲ್ಲಿಯು ಬ್ಯಾಂಕಿಂಗ್ ವ್ಯವಹಾರ ನಡೆಯುತ್ತಿದೆ. ಅಲ್ಲದೆ ವಾಲ್ನೂರು ಶಾಖೆ ವತಿಯಿಂದ ಸಹಕಾರ ಸಭಾಂಗಣ ನಿರ್ಮಿಸಿದ್ದು ಸದಸ್ಯರಿಗೆ ಮದುವೆ ಮತ್ತು ಇನ್ನಿತರ ಕಾರ್ಯಕ್ರಮಗಳಿಗೆ ರಿಯಾಯಿತಿ ದರದಲ್ಲಿ ಬಾಡಿಗೆಗೆ ನೀಡಲಾಗುತ್ತಿದೆ. 2 ಟ್ರ್ಯಾಕ್ಟರ್, 1 ಮಿನಿ ಲಾರಿಯನ್ನು ಹೊಂದಿದ್ದು, ರೈತ ಸದಸ್ಯರುಗಳಿಗೆ ಉಳುಮೆಗೆ, ಕೃಷಿ ಕೆಲಸ ಮತ್ತು ಸಾಗಾಣೆಗೆ ರಿಯಾಯಿತಿ ದರದಲ್ಲಿ ಕಳುಹಿಸಿಕೊಡಲಾಗುತ್ತದೆ. ಸಂಘದ ವತಿಯಿಂದ 2 ರೈತ ಕೂಟ ಮತ್ತು 2 ಜಂಟಿ ಭಾದ್ಯತಾ ಗುಂಪುಗಳನ್ನು ರಚಿಸಿದ್ದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಸಂಘದ ವತಿಯಿಂದ ಸದಸ್ಯರ ಮಕ್ಕಳು 7 ಮತ್ತು 10ನೇ ತರಗತಿಯನ್ನು ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸೂಕ್ತ ಬಹುಮಾನ ನೀಡಲಾಗುತ್ತಿದೆ. ಉತ್ತಮವಾಗಿ ಕಾರ್ಯನಿರ್ವಯಿಸುತ್ತಿರುವ ಸ್ವಸಹಾಯ ಸಂಘವನ್ನು ಗುರುತಿಸಿ ಪ್ರೋತ್ಸಾಹಕ ಬಹುಮಾನ ನೀಡಲಾಗುತ್ತಿದೆ.

2017-18ನೇ ಸಾಲಿನ ವಾರ್ಷಿಕ ಮಹಾಸಭೆ ತಾ. 29 ರಂದು ನಂಜರಾಯಪಟ್ಟಣದ ಪ್ರೌಢಶಾಲಾ ಆವರಣದಲ್ಲಿ ನಡೆಯಲಿದೆ. ಅಲ್ಲದೆ ಸದಸ್ಯರ ಪಾಲು ಹಣದ ಮೇಲೆ ಶೇ. 10 ರ ಡಿವಿಡೆಂಡ್ ನೀಡಲು ಇತ್ತೀಚೆಗೆ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ಎಲ್. ಮಹೇಶ್ಚಂದ್ರ ತಿಳಿಸಿದ್ದಾರೆ. ಉಪಾಧ್ಯಕ್ಷ ಎ.ಎಸ್. ಸೀತಮ್ಮ, ನಿರ್ದೇಶಕರಾದ ಎ.ವಿ. ಶಾಂತಕುಮಾರ್, ಜಿ.ಎಂ. ಮಣಿಕುಮಾರ್, ಸಿ.ಪಿ. ವಿಜಯ (ಜತ್ತ) ಎ.ಎಂ. ಲೋಕನಾಥ್, ಪಿ.ಬಿ. ಅಶೋಕ್, ಜೆ.ಪಿ. ರಾಜು, ಬಿ.ಜಿ. ಸುರೇಶ್ ಬಿ.ಟಿ. ಪ್ರಸನ್ನ ಹೆಚ್.ಎಸ್. ಕಮಲಮ್ಮ ಹಾಜರಿದ್ದರು.