ಮಡಿಕೇರಿ, ಜು. 28: ಕಕ್ಕಡ ಮಾಸದ ಚಳಿಯಲ್ಲಿ ಉಷ್ಣಕಾರಕ ಆಹಾರ ಸೇವನೆ ಸಾಮಾನ್ಯವಾಗಿದ್ದು, ಕಣಿಲೆ, ಮರಕೆಸು ಇತ್ಯಾದಿ ಭಕ್ಷ್ಯ ಸಸ್ಯಾಹಾರಿಗಳಿಗಾಗಿದೆ. ಇನ್ನು ಮಾಂಸಾಹಾರಿಗಳು ನಾಟಿ ಕೋಳಿ, ಏಡಿ ಇತ್ಯಾದಿ ತಿನ್ನುತ್ತಾರೆ. ಪ್ರಸಕ್ತ ಇಲ್ಲಿನ ಖಾಸಗಿ ಬಸ್ ನಿಲ್ದಾಣ ಬಳಿ ಕಕ್ಕಡ ಏಡಿಯು ಮಾರ್ಗ ಬದಿ ಭರಾಟೆಯ ವ್ಯಾಪಾರ ನಡೆಯುತ್ತಿದೆ. ಕೆ.ಜಿ.ಯೊಂದಕ್ಕೆ ರೂ. 250 ರಿಂದ 300 ರಂತೆ ಗ್ರಾಹಕರು ಖರೀದಿ ಮಾಡುತ್ತಿದ್ದಾರೆ. ಮೇಲಿನ ಚಿತ್ರದಲ್ಲಿ ಏಡಿಯೊಂದನ್ನು ಹಿಡಿದುಕೊಂಡಿರುವ ವ್ಯಕ್ತಿಯ ಕೈಯಲ್ಲಿ ಅದರ ಗಾತ್ರವನ್ನು ಕಾಣಬಹುದು.