*ಸಿದ್ದಾಪುರ, ಜು. 28: ಅಭ್ಯತ್‍ಮಂಗಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷರಾಗಿ ಸುಮಾ ದೇವಪ್ಪ ಆಯ್ಕೆಯಾಗಿದ್ದಾರೆ.
2018ನೇ ಸಾಲಿನ ಶಾಲಾಭಿವೃದ್ಧಿ ಸಮಿತಿಗೆ ಸದಸ್ಯರುಗಳ ಆಯ್ಕೆ ಪಕ್ರಿಯೆಗೆ ಶಾಲೆಯ ಮುಖ್ಯೋಪಾಧ್ಯಾಯರಾದ ಮಾರ್ಗೆಟ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸಭೆ ನಡೆಯಿತು.ಸರಕಾರದ ಮಾರ್ಗಸೂಚಿ ಪ್ರಕಾರ ಶಾಲಾಭಿವೃದ್ಧಿ ಸಮಿತಿಗೆ 8 ಮಂದಿ ಪರಿಶಿಷ್ಟ ಜಾತಿ, 4 ಮಂದಿ ಪರಿಶಿಷ್ಟ ಪಂಗಡ ನಾಲ್ವರು ಅಲ್ಪಸಂಖ್ಯಾತರ ಸದಸ್ಯರುಗಳನ್ನು ಆಯ್ಕೆಮಾಡಬೇಕೆಂದು ನಿಯಮವಿದೆ ಎಂದು ಮುಖ್ಯೋಪಾಧ್ಯಾಯರು ಸರಕಾರದ ಆದೇಶ ತಿಳಿಸಿದರು.
ಆದರಂತೆ ಪೋಷಕರುಗಳ ಸಮ್ಮುಖದಲ್ಲಿ ಉಪಾಧ್ಯಕ್ಷರಾಗಿ ಲೀಲಾರಾಜು, ಕಾರ್ಯದರ್ಶಿಯಾಗಿ ಮುಖ್ಯೋಪಾಧ್ಯಾಯರಾದ ಮಾರ್ಗೆಟ್ ನಾಮ ನಿರ್ದೇಶಕ ಸದಸ್ಯರುಗಳಾಗಿ ಅಂಚೆಮನೆ ಸುಧಿ ಸೇರಿದಂತೆ 15 ಜನರನ್ನು ನೇಮಕಗೊಳಿಸಲಾಯಿತು. ಶಾಲೆಯ ಸಹಶಿಕ್ಷಕ ಅಶ್ರಫ್ ಮಾತನಾಡಿ, ಶಾಲೆಗೆ ಮಳೆಯ ರಜೆ ಬಗ್ಗೆ ಮಾಹಿತಿ ನೀಡಲು ಪೋಷಕರು ತಮ್ಮ ಮೊಬೈಲ್ ನಂಬರ್ ನೀಡಿದರೆ ನಾವು ವಾಟ್ಸ್‍ಪ್‍ನಲ್ಲಿ ಮಾಹಿತಿ ನೀಡುತ್ತೇವೆ. ಯಾವದೇ ಕಾರಣಕ್ಕೂ ಮಕ್ಕಳ ಹಾಜರಾತಿ ಕಡಿಮೆಯಾಗಬಾರದೆಂದರು.
ಆರೋಗ್ಯ ಇಲಾಖೆ ಸಹಾಯಕಿ ಗೀತ, ಅಂಗನವಾಡಿ ಕಾರ್ಯಕರ್ತೆ ಕಾವೇರಮ್ಮ ಸಭೆಯಲ್ಲಿ ಹಾಜರಿದ್ದರು.