ಸಿದ್ದಾಪುರ, ಜು. 28: ವೀರಾಜಪೇಟೆ ಅರಣ್ಯ ಇಲಾಖೆ ವತಿಯಿಂದ ಕಣ್ಣಂಗಾಲ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಉಪ ವಲಯ ಅರಣ್ಯಾಧಿಕಾರಿ ಕಳ್ಳಿರ ದೇವಯ್ಯ ಮಾತನಾಡಿ, ಮರ-ಗಿಡಗಳನ್ನು ನೆಡುವ ಮೂಲಕ ಎಲ್ಲರು ಪರಿಸರವನ್ನು ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು.

ವಿದ್ಯಾರ್ಥಿಗಳು ಪರಿಸರದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕೆಂದು ಕಿವಿ ಮಾತನ್ನು ಹೇಳಿದರು. ಕಾರ್ಯಕ್ರಮದಲ್ಲಿ ವೀರಾಜಪೇಟೆ ತಾಲೂಕು ಡಿ.ಸಿ.ಎಫ್. ಮರಿಯ ಕ್ರಿಸ್ತರಾಜ್, ಎ.ಸಿ.ಎಫ್. ರೋಶಿಣಿ, ಆರ್.ಎಫ್.ಓ. ಗೋಪಾಲ್, ಉಪವಲಯ ಅರಣ್ಯಧಿಕಾರಿ ಗಣೇಶ್ ಮುಖ್ಯ ಶಿಕ್ಷಕ ಮೋಹನ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.