ವೀರಾಜಪೇಟೆ, ಜು. 10 : ಪರಿಸರವು ಮನುಷ್ಯನ ಬದುಕಿಗೆ ಪರಿಪೂರ್ಣತೆಯನ್ನು ನೀಡುತ್ತದೆ. ಈ ಕಾರಣದಿಂದಾಗಿ ಪರಿಸರನ್ನು ಸಂರಕ್ಷಿಸುವ ಕರ್ತವ್ಯ ಮನುಷ್ಯನಿಗೆ ಮಾತ್ರವಿದಯೆಂದು ಹಿರಿಯ ಪರಿಸರ ತಜ್ಞ ಡಾ. ಎಸ್.ವಿ. ನರಸಿಂಹನ್ ಹೇಳಿದರು. ಅವರು ವೀರಾಜಪೇಟೆ ಸಮೀಪದ ಅರಮೇರಿ ಶ್ರೀ ಕಳಂಚೇರಿ ಮಠದ ಶ್ರೀ ಶಾಂತಮಲ್ಲಸ್ವಾಮಿ ಸಭಾಂಗಣದಲ್ಲಿ ‘ಹೊಂಬೆಳಕು’ ಮಾಸಿಕ ತತ್ವ ಚಿಂತನ ಗೋಷ್ಠಿಯ 178ನೇ ಕಿರಣದಲ್ಲಿ ‘ಪರಿಸರ ಗೀತೆಗಳು, ಒಂದು ರೂಪಕ’ ಎಂಬ ವಿಷಯದ ಮೇಲೆ ನಡೆದ ಗೀತೆಗಳ ಪ್ರಸ್ತುತಿ ಕಾರ್ಯಕ್ರಮದ ನಿರೂಪಕರಾಗಿ ಮಾತನಾಡಿದರು.

ನಿರ್ಮಲಾ ಗೋಪಾಲಕೃಷ್ಣ ಕಾಮತ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೀರಾಜಪೇಟೆಯ ಡಾ. ಎಂ.ವಿ. ದೀಪಕ್, ಕೇರಳದ ಕಾಲಡಿಯ ಸೈಂಟ್ ಗ್ರಿಗೋರಿಯಸ್ ಡೆಂಟಲ್ ಕಾಲೇಜಿನ ಪ್ರಾಧ್ಯಾಪಕಿ ಡಾ. ಎಸ್. ಸುಪ್ರೀತ ಮತ್ತು ಡಾ. ಆಯುಷ್ ಎಂ.ಡಿ. ಇವರು ಹೆಸರಾಂತ ಕಲಾವಿದೆ ಡಾ. ಹೆಚ್.ಆರ್. ಲೀಲಾವತಿ ವಿರಚಿತ ಪರಿಸರ ಗೀತೆಗಳನ್ನು ಗಾಯನದ ಮೂಲಕ ಪ್ರಸ್ತುತಪಡಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶಾಂತಮಲ್ಲ್ಲಕಾರ್ಜುನ ಸ್ವಾಮೀಜಿ ವಹಿಸಿದ್ದರು.

ಸಿಂಧು ಸ್ವಾಗತಿಸಿದರು. ಭೀಮಯ್ಯ ನಿರೂಪಿಸಿದರು.