ವೀರಾಜಪೇಟೆ, ಜು. 7: ಕೊಡವ ಸಾಹಿತ್ಯ, ಸಂಸ್ಕøತಿ, ಕಲೆ, ಜಾನಪದಗಳ ಮೇಲೆ ಅರಿವು ಹಾಗೂ ಜಾಗೃತಿ ಮೂಡಿಸುವ ಸಲುವಾಗಿ ಅಕ್ಟೋಬರ್ 23, 24 ರಂದು ವೀರಾಪೇಟೆಯಲ್ಲಿ ಕೊಡವ ಮೇಳವನ್ನು ಆಯೋಜಿಸ ಲಾಗುವದೆಂದು ಪಂಜರಪೇಟೆ ಕೊಡವ ಕೇರಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಹೇಳಿದರು.
ಇತ್ತೀಚೆಗೆ ವೀರಾಜಪೇಟೆಯ ಪಂಜರಪೇಟೆ ಕೊಡವ ಕೇರಿ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ವೀರಾಜಪೇಟೆ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇತ್ತೀಚಿನ ಹಲವು ವರ್ಷಗಳಿಂದ ಯಾವದೇ ರೀತಿಯ ಕೊಡವ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯದೆ ಇರುವದರಿಂದ ಮಕ್ಕಳಾದಿಯಾಗಿ ಎಲ್ಲರಲ್ಲೂ ಕೊಡವ ಸಂಸ್ಕøತಿಯ ಪರಿಜ್ಞಾನ ಮೂಡಿಸಬೇಕಾದ ಅನಿವಾರ್ಯತೆ ಕಂಡುಬಂದಿದೆ. ಈ ನಿಟ್ಟಿನಲ್ಲಿ ಕೊಡವ ಮೇಳವನ್ನು ಆಯೋಜಿಸಲಾಗಿದೆ.
ವೀರಾಜಪೇಟೆ ಕೊಡವ ಸಮಾಜದ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ಮೇಳದಲ್ಲಿ ಜನಾಂಗ, ನಾಡು, ನುಡಿಯ ಬಗ್ಗೆ ಬೆಳಕು ಚೆಲ್ಲಲಾಗುವದು ಎಂದರು. ಈ ಸಲುವಾಗಿ ಅಕ್ಟೋಬರ್ 23 ರಂದು ಬೆಳಿಗ್ಗೆ 10 ಗಂಟೆಗೆ ವೀರಾಜಪೇಟೆ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಕೊಡವ ಸಾಂಸ್ಕøತಿಕ ಮೆರವಣಿಗೆಯೊಂದಿಗೆ ಮೇಳಕ್ಕೆ ಚಾಲನೆ ನೀಡಲಾಗುವದು ಎಂದ ನಾಚಯ್ಯ, ಮೇಳದಂದು ವಿಚಾರ ಮಂಡನೆ, ಸಾಂಸ್ಕøತಿಕ ಪ್ರದರ್ಶನ, ಕೊಡವ ಆರ್ಕೆಸ್ಟ್ರಾ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು.
ಮೇಳಕ್ಕೆ ಸುಮಾರು ಹತ್ತು ಸಾವಿರ ಜನರನ್ನು ಸೇರಿಸುವ ಚಿಂತನೆಯಿದ್ದು ಸುವ್ಯವಸ್ಥೆ ಹಾಗೂ ಶಿಸ್ತುಬದ್ಧತೆಯಿಂದ ಮೇಳವನ್ನು ನಡೆಸಲಾಗುವದು ಎಂದರು.
ಬಳಿಕ ಅಖಿಲ ಕೊಡವ ಸಮಾಜದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ವೀರಾಜಪೇಟೆ ಕೊಡವ ಸಮಾಜ ಅಧ್ಯಕ್ಷರಾದ ವಾಂಚಿರ ಟಿ. ನಾಣಯ್ಯ, ಮೇಕೇರಿರ ರವಿ ಪೆಮ್ಮಯ್ಯ, ಅಲ್ಲಪಂಡ ಚಿಣ್ಣಪ್ಪ, ಬೇಪಡಿಯಂಡ ಬಿದ್ದಪ್ಪ, ನಡಿಕೇರಿಯಂಡ ಮಹೇಶ್, ಪರದಂಡ ವಿಠಲ, ಕಂಜಿತಂಡ ಮಂದಣ್ಣ, ಚೆರುಮಂದಂಡ ಎಂ. ನಾಣಯ್ಯ, ಆಟ್ರಂಗಡ ವಿಶ್ವನಾಥ ಮುಂತಾದವರು ಕೊಡವ ಮೇಳವನ್ನು ಸುಲಲಿತವಾಗಿ ನಡೆಸುವ ಬಗ್ಗೆ ತಮ್ಮ ಅಭಿಪ್ರಾಯ ಹಾಗೂ ಸಲಹೆ ನೀಡಿದರು.
ಕೇರಿಯ ಗೌರವ ಕಾರ್ಯದರ್ಶಿ ಚೇಂದಂಡ ವಸಂತ್ ಸ್ವಾಗತಿಸಿ, ವಂದಿಸಿದರು. ವೇದಿಕೆಯಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಕೊಪ್ಪಿರ ಅಮಿತ್ ಸೋಮಯ್ಯ, ಆಟೋಟ ಕಾರ್ಯದರ್ಶಿ ಕಳ್ಳಿಚಂಡ ಡಿಂಪಲ್ ನಾಚಪ್ಪ, ನಿರ್ದೇಶಕರಾದ ಬೊಳೆಯಾಡಿರ ಮನು ಮುತ್ತಪ್ಪ, ಆಟ್ರಂಗಡ ನವಿನ್, ಆಟ್ರಂಗಡ ಲೋಹಿತ್ ಮಾದಪ್ಪ, ಕೋಟ್ರಮಾಡ ರಮೇಶ್ ಸೋಮಯ್ಯ, ಮೀದೇರಿರ ಸತೀಶ್, ಕೊಂಗಂಡ ಪ್ರತಿಕ, ಮುಕ್ಕಾಟಿರ ಸ್ವರ್ಣ ಬಿದ್ದಪ್ಪ, ಕಾಳಚೆಟ್ಟಿರ ಜಯ ತಮ್ಮಯ್ಯ ಮುಂತಾದವರಿದ್ದರು.