ಮಡಿಕೇರಿ, ಜು. 7: ಕರ್ನಾಟಕ ಲಲಿತಕಲಾ ಅಕಾಡೆಮಿಯು 2018-19ನೇ ಸಾಲಿನ 47ನೇ ವಾರ್ಷಿಕ ಕಲಾಪ್ರದರ್ಶನ ಬಹುಮಾನಕ್ಕೆ ಅರ್ಹ ಚಿತ್ರಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ.

ರಾಜ್ಯದ ನಿವಾಸಿಗಳಾಗಿರುವ ಅಥವಾ ಕಳೆದ 5 ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿರುವ ಕಲಾವಿದರು ಈ ಕಲಾಪ್ರದರ್ಶನದಲ್ಲಿ ಭಾಗವಹಿಸಬಹುದಾಗಿದೆ. 47ನೇ ವಾರ್ಷಿಕ ಕಲಾ ಪ್ರದರ್ಶನ ಬಹುಮಾನಕ್ಕೆ ತೀರ್ಪುಗಾರರಿಂದ ಆಯ್ಕೆ ಮಾಡಿದ ಒಟ್ಟು ಹತ್ತು ಕಲಾಕೃತಿಗಳಿಗೆ ತಲಾ ರೂ. 25 ಸಾವಿರಗಳ ನಗದು ಪ್ರಶಸ್ತಿ ಪತ್ರ, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವದು.

ಕಲಾ ಪ್ರದರ್ಶನದಲ್ಲಿ ಭಾಗವಹಿಸಲಿಚ್ಚಿಸುವ ಕಲಾವಿದರು ತಮ್ಮ ಕಲಾಕೃತಿಗಳ ಛಾಯಾಚಿತ್ರಗಳನ್ನು ನಿಗದಿತ ಅರ್ಜಿಯೊಂದಿಗೆ ಸಲ್ಲಿಸಬೇಕು. (2017ರ ಹಿಂದೆ ರಚಿತವಾದ ಕಲಾಕೃತಿಗಳನ್ನು ಅಕಾಡೆಮಿಯು ಬಹುಮಾನಕ್ಕಾಗಿ ಪರಿಗಣಿಸುವದಿಲ್ಲ). ಆಯ್ಕೆ ಸಮಿತಿಯು ಮೂಲ ಕೃತಿಗಳ ಛಾಯಾಚಿತ್ರ ಆಧರಿಸಿ ಆಯ್ಕೆ ಮಾಡಿದ ನಂತರ ಮೂಲ ಕೃತಿಗಳನ್ನು ಕಳುಹಿಸಬೇಕಾಗುತ್ತದೆ, ಬಹುಮಾನ ಪ್ರದರ್ಶನಕ್ಕೆ ಕಳುಹಿಸುವ ಕಲಾಕೃತಿಗಳು ಗರಿಷ್ಠ 0*3 ಅಡಿ ಅಳತೆಯನ್ನು ಮೀರದಂತೆ ಕಳುಹಿಸಬೇಕು.

ಅನುಸೂಚಿಯನ್ನು ಸರಿಯಾಗಿ ಭರ್ತಿಮಾಡಿ ಮೂಲ ಕಲಾಕೃತಿ. ಛಾಯಾಚಿತ್ರಗಳೊಂದಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿಗೆ ಅರ್ಜಿಯನ್ನು ತಾ. 28 ರವರೆಗೆ ಕಳುಹಿಸಬೇಕು. ಅವಧಿ ಮುಗಿದ ನಂತರ ಬರುವ ಯಾವದೇ ಅರ್ಜಿಗಳನ್ನು ಸ್ವೀಕರಿಸುವದಿಲ್ಲ.

ವ್ಯಕ್ತಿ ಪರಿಚಯ, ದೂರವಾಣಿ/ ಮೊಬೈಲ್ ಸಂಖ್ಯೆ/ ಇ-ಮೇಲ್ ಹಾಗೂ ಕಲಾವಿದರ ಭಾವಚಿತ್ರದೊಂದಿಗೆ ಕಲಾಕೃತಿಯ 5*7 ಅಳತೆಯ ಛಾಯಾಚಿತ್ರಗಳನ್ನು ಮಾತ್ರ ಸ್ವೀಕರಿಸಲಾಗುವದು, ಕಲಾಪ್ರದರ್ಶನಕ್ಕೆ ವ್ಯಕ್ತಿ ಪರಿಚಯ ಮತ್ತು ಅವರ ಭಾವಚಿತ್ರದೊಂದಿಗೆ ಪ್ರವೇಶ ಶುಲ್ಕ ರೂ. 300 ಗಳ ನಗದು ಅಥವಾ ರಿಜಿಸ್ಟ್ರಾರ್, ಕರ್ನಾಟಕ ಲಲಿತಕಲಾ ಅಕಾಡೆಮಿಗೆ ಸಲ್ಲುವಂತೆ ಪಡೆದು ಡಿ.ಡಿ ಮೂಲಕ ಅಕಾಡೆಮಿಗೆ ನೀಡಿ ರಸೀದಿ ಪಡೆಯಬೇಕು. ಹೆಚ್ಚಿನ ಮಾಹಿತಿಗೆ 47ನೇ ವಾರ್ಷಿಕ ಕಲಾಪ್ರದರ್ಶನ ವಿತರಣಾ ಪತ್ರದಲ್ಲಿ ನಮೂದಿಸಿರಲಾಗಿರುತ್ತದೆ, ಅರ್ಜಿಗಳನ್ನು ಅಕಾಡೆಮಿಯ ವೆಬ್‍ಸೈಟ್ ಮೂಲಕ ತಿತಿತಿ.ಟಚಿಟiಣಚಿಞಚಿಟಚಿಞಚಿಡಿಟಿಚಿಣಚಿಞಚಿ.oಡಿg ಪಡೆಯಬಹುದು.

ಅರ್ಜಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಲಲಿತಕಲಾ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ ರಸ್ತೆ ಬೆಂಗಳೂರು-560002, ಇವರಿಗೆ ಖುದ್ದಾಗಿ ಅಥವಾ ರೂ.10 ಗಳ ಅಂಚೆ ಚೀಟಿ ಲಗತ್ತಿಸಿದ ಸ್ವ-ವಿಳಾಸವುಳ್ಳ (ದೂರವಾಣಿ ಸಂಖ್ಯೆಯೊಂದಿಗೆ) ಲಕೋಟೆಯನ್ನು ಕಳುಹಿಸಿ ಪಡೆಯಬಹುದಾಗಿದೆ. ಕಳುಹಿಸಲ್ಪಡುವ ಲಕೋಟೆಯ ಮೇಲೆ 47 ನೇ ವಾರ್ಷಿಕ ಕಲಾ ಪ್ರದರ್ಶನಕ್ಕಾಗಿ ಅರ್ಜಿ ಎನ್ನುವದನ್ನು ಸ್ಪಷ್ಟವಾಗಿ ಬರೆದಿರಬೇಕು ಎಂದು ಪ್ರಕಟಣೆ ತಿಳಿಸಿದೆ.

ಪುಸ್ತಕ ಬಹುಮಾನ ಯೋಜನೆಗೆ

ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು ಪ್ರತಿ ವರ್ಷದಂತೆ 2016, 2017 ಮತ್ತು 2018ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗಾಗಿ ವಿವಿಧ ಪ್ರಕಾರಗಳ ಶಿಲ್ಪಕಲೆಗೆ ಸಂಬಂಧಿಸಿದ ಕನ್ನಡ ಪುಸ್ತಕಗಳನ್ನು ಆಹ್ವಾನಿಸಲಾಗಿದೆ.

ಪುಸ್ತಕ ವಿಮರ್ಶಕರು ಆಯ್ಕೆ ಮಾಡುವ ಒಂದು ಪುಸ್ತಕಕ್ಕೆ ಬಹುಮಾನ ನೀಡಲಾಗುವದು. ಬಹುಮಾನಕ್ಕೆ ಸಲ್ಲಿಸುವ ಕೃತಿಗಳು ಪ್ರಥಮ ಆವೃತ್ತಿಯಾಗಿ ಪ್ರಕಟವಾಗಿರುವ ಕೃತಿಗಳಾಗಿರಬೇಕು. 2016 ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಜನವರಿ 1, 2015 ರಿಂದ ಡಿಸೆಂಬರ್ 31 2015 ರ ಅವಧಿಯಲ್ಲಿ ಮುದ್ರಣವಾಗಿರಬೇಕು. 2017 ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಜನವರಿ 1 2016 ರಿಂದ ಡಿಸೆಂಬರ್ 31, 2016 ರ ಅವಧಿಯಲ್ಲಿ ಮುದ್ರಣಗೊಂಡಿರಬೇಕು. ಹಾಗೂ 2018ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಜನವರಿ 1, 2017 ರಿಂದ ಡಿಸೆಂಬರ್ 31, 2018 ರ ಅವಧಿಯಲ್ಲಿ ಮುದ್ರಣಗೊಂಡಿರಬೇಕು. ಪುಸ್ತಕದ ತಾಂತ್ರಿಕ ಪುಟದಲ್ಲಿ ಪ್ರಥಮ ಮುದ್ರಣ ಎಂದು ಮುದ್ರಿತವಾಗಿರಬೇಕು.

ಪುಸ್ತಕ ಬಹುಮಾನದ ಮೊತ್ತ ರೂ. 25 ಸಾವಿರ, ಪುಸ್ತಕ ಬಹುಮಾನಕ್ಕೆ ಕಳುಹಿಸುವ ಪುಸ್ತಕಗಳು ಪುನರ್ ಮುದ್ರಣವಾಗಿರಬಾರದು. ಮೊದಲ ಆವೃತಿಯಲ್ಲಿ ಪ್ರಕಟಗೊಂಡಿರಬೇಕು, ಪುಸ್ತಕ ಬಹುಮಾನಕ್ಕೆ ಕಳುಹಿಸುವ ಪುಸ್ತಕಗಳು ಯಾವದೇ ತರಗತಿಗಳಿಗೆ ಪಠ್ಯ ಪುಸ್ತಕವಾಗಿರಬಾರದು, ಪುಸ್ತಕ ಲೇಖಕರ ಸ್ವಂತ ರಚನೆಯಾಗಿರಬೇಕು. ಸಂಪಾದಿತ ಕೃತಿಯಾಗಿರಬಾರದು, ಪುಸ್ತಕ ಬಹುಮಾನಕ್ಕೆ ಆಯ್ಕೆಯಾದ ಪುಸ್ತಕದ ಲೇಖಕರಿಗೆ ಈ ಬಹುಮಾನ ನೀಡಲಾಗುವದು. ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡುವಾಗ ಈ ವರ್ಷದಲ್ಲಿ ಕನಿಷ್ಟ 3 ಪುಸ್ತಕಗಳು ಬಹುಮಾನಕ್ಕೆ ಸ್ವೀಕೃತವಾಗಿರಬೇಕು, ಒಂದೇ ಪ್ರಕಾರದಲ್ಲಿ ಎರಡು ಬಾರಿ ಪುಸ್ತಕ ಬಹುಮಾನ ಪಡೆದವರ ಪುಸ್ತಕವನ್ನು ಅದೇ ಪ್ರಕಾರದಲ್ಲಿ ಮತ್ತೆ ಬಹುಮಾನಕ್ಕೆ ಪರಿಗಣಿಸಲಾಗುವದಿಲ್ಲ,

ಪ್ರಕಟವಾದ ಪುಸ್ತಕಗಳ ತಲಾ 4 ಪ್ರತಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಕನ್ನಡ ಭವನ 1ನೇ ಮಹಡಿ ಜೆ.ಸಿ ರಸ್ತೆ ಬೆಂಗಳೂರು-580002. ಇವರಿಗೆ ನೋಂದಾಯಿತ ಅಂಚೆ/ ಕೊರಿಯರ್ ಮೂಲಕ ಅಥವಾ ಖುದ್ದಾಗಿ ಆಗಸ್ಟ್, 31 ರೊಳಗೆ ತಲುಪಿಸಬೇಕಾಗಿ ಕೋರಿದೆ. ಕಳುಹಿಸಲ್ಪಡುವ ಪುಸ್ತಕದ ಮೇಲೆ ತಿಳಿಸಿದ ಪ್ರಕಾರಗಳಲ್ಲಿ ಯಾವ ಶಿಲ್ಪಕಲಾ ಪ್ರಕಾರಕ್ಕೆ ಸೇರುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ಪುಸ್ತಕದ ಶೀರ್ಷಿಕೆ ಪುಟದಲ್ಲಿ ಬರೆದಿರಬೇಕು ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ರಿಜಿಸ್ಟ್ರಾರ್ ತಿಳಿಸಿದ್ದಾರೆ.