ಮಡಿಕೇರಿ, ಜು. 6: ರಾಜ್ಯ ಸಮ್ಮಿಶ್ರ ಸರಕಾರದ ಪರವಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಗುರುವಾರ ದಿನ ಮಂಡಿಸಿದ ನೂತನ ಬಜೆಟ್‍ನಲ್ಲಿ ರೂ. 50,000 ದವರೆಗೆ ಕೃಷಿಕರ ಸಾಲ ಮನ್ನಾ ಮಾಡಿರುವದು ಕಾಫಿ ಬೆಳೆಗಾರರಿಗೂ ಅನ್ವಯ ವಾಗಲಿದೆ. ಕೊಡಗಿನಲ್ಲಿ ವಿವಿಧ ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಸಾಲ ಪಡೆದಿರುವ ಸಾವಿರಾರು ಮಂದಿ ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ಜಿಲ್ಲಾ ನಬಾರ್ಡ್ ಅಧಿಕಾರಿ ಯಂ.ಸಿ. ನಾಣಯ್ಯ “ಶಕ್ತಿ”ಗೆ ತಿಳಿಸಿದ್ದಾರೆ.

ಪ್ರಸಕ್ತ ಲಭ್ಯವಿರುವ ಮಾಹಿತಿ ಯನ್ವಯ ಕೊಡಗಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಅವಧಿ ಮೀರಿದ ಫಸಲು ಸಾಲ ಹೊಂದಿರುವ ಬೆಳೆÉಗಾರರ ಸಂಖ್ಯೆ 46,581 ಮಂದಿ. ಈ ಪೈಕಿ 27413 ಮಂದಿ ಸಣ್ಣ ಮತ್ತು ಮಧ್ಯಮ ಬೆಳೆಗಾರರಿದ್ದಾರೆ. ಈ ಬೆಳೆÉಗಾರರು ಹೊಂದಿರುವ ಅವಧಿ ಮೀರಿದ ಸಾಲದ ಪ್ರಮಾಣ ಒಟ್ಟು ರೂ.885 ಕೋಟಿ 73 ಲಕ್ಷಗಳಾಗಿವೆ. ಈ ಪೈಕಿ ರೂ. 361 ಕೋಟಿ 39 ಲಕ್ಷ ಸಣ್ಣ ಮತ್ತು ಮಧ್ಯಮ ಬೆಳೆಗಾರರ ಸಾಲವೂ ಒಳಗೊಂಡಿದೆ. ಸಾಲ ಸೌಲಭ್ಯ ಪ್ರಮಾಣವಾದ ತಲಾ ರೂ. 2 ಲಕ್ಷ ಸೌಲಭ್ಯ ಹೊಂದಲು ಸರಕಾರ ವಿಧಿಸಿರುವ ನಿರ್ಬಂಧ ಸೂತ್ರಗಳ ಅನ್ವÀಯ ಬೆಲೆಗಾರರು ಅರ್ಹತೆ ಪಡೆಯುತ್ತಾರೆ ಎಂದು ಯಂ.ಸಿ.ನಾಣಯ್ಯ ಹಾಗೂ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗುಪ್ತಾ ಇವರುಗಳು “ಶಕ್ತಿ” ಗೆ ಮಾಹಿತಿಯಿತ್ತರು.

(ಮೊದಲ ಪುಟದಿಂದ) ಉಳಿದಂತೆ ಯಾವ ರೀತಿ ಕ್ರಮದಲ್ಲಿ ಹಾಗೂ ಯಾವ ಮಾನದಂಡದಲ್ಲಿ ಈ ಸಾಲ ಮನ್ನಾವನ್ನು ಜಾರಿಗೊಳಿಸ ಬೇಕು ಎನ್ನುವ ಸ್ಪಷ್ಟ ಮಾಹಿತಿ ತಾ. 12 ರಂದು ಅಧಿಕೃತ ಸುತ್ತೋಲೆ ಮೂಲಕ ಬ್ಯಾಂಕ್‍ಗಳಿಗೆ ಸರಕಾರ ದಿಂದ ಕಳುಹಿಸಲ್ಪಡುವ ಸಾಧ್ಯತೆಯಿರು ವದಾಗಿ ಇವರುಗಳು ತಿಳಿಸಿದರು.

ಬೆಳೆಗಾರರ ಪ್ರಾಮಾಣಿಕತೆ

ಕೊಡಗೂ ಸೇರಿದಂತೆ ಕರ್ನಾಟಕದ ಬೆಳೆಗಾರರು ಎಷ್ಟೇ ಕಷ್ಟವಿರಲಿ ಬ್ಯಾಂಕ್ ಗಳಿಗೆ ಸಾಲ ಮರುಪಾವತಿ ಮಾಡಲು ಪ್ರಾಮಾಣಿಕತೆ ಮೆರೆದಿದ್ದಾರೆ ಎಂದು ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದ ಜಿಲ್ಲಾ ವಕ್ತಾರರಾಗಿರುವ ಕೆ.ಕೆ.ವಿಶ್ವನಾಥ್ “ಶಕ್ತಿ”ಗೆ ಅಂಕಿ ಅಂಶ ಸಹಿತ ಮಾಹಿತಿಯಿತ್ತಿದ್ದಾರೆ. ಇಡೀ ರಾಜ್ಯದಲ್ಲಿ ಕಾಫಿ ಬೆಳೆಗಾರರು ವಿವಿಧ ಬ್ಯಾಂಕ್‍ಗಳಿಂದ ಪಡೆದಿರುವ ವಿವಿಧ ಸಾಲಗಳ ಮರುಪಾವತಿ ಪೈಕಿ ಅವಧಿ ಮೀರಿದ ಸಾಲದ ಪ್ರಮಾಣ ಒಟ್ಟು ರೂ. 5944.57 ಕೋಟಿಗಳಾಗಿವೆ. ಆದರೆ, ಈ ಪೈಕಿ ಎನ್‍ಪಿಎ(ಕಾರ್ಯ ನಿರ್ವಹಿಸದ ಸ್ವತ್ತುಗಳ) ಪ್ರಮಾಣ ಕೇವಲ ರೂ. 396.23 ಕೋಟಿ ಗಳಾಗಿದ್ದು ಇದು ಶೇ. 6.67 ಮಾತ್ರ ಎಂಬದು ಇದಕ್ಕೆ ಸ್ಪಷ್ಟ ನಿದರ್ಶನ ಎಂದು ಅವರು ಖಚಿತಪಡಿಸಿದ್ದಾರೆ.

ಆದರೂ ಸರಕಾರ ಬೆಳೆÉಗಾರರ ಬಗ್ಗೆ ಹೆಚ್ಚಿನ ಕಾಳಜಿ ತೋರದಿರುವದು ವಿಷಾದಕರ ಎಂದಿದ್ದಾರೆ. ಸಕಾಲದಲ್ಲಿ ಗೊಬ್ಬರ ಹಾಕಲು ಸಾಲ ನೀಡಲು ಕೂಡ ಹಿಂಜರಿಯುತ್ತಿರುವದು ಆಘಾತಕರ ಎಂದು ಅಭಿಪ್ರಾಯಪಟ್ಟಿದ್ದಾರೆ.