ಸುಂಟಿಕೊಪ್ಪ, ಜು. 3: ಪದವಿಪೂರ್ವ ಕಾಲೇಜಿನಲ್ಲಿ ಕ್ಯಾಂಪಸ್ ಪ್ರಂಟ್ ಆಫ್ ಇಂಡಿಯ ವತಿಯಿಂದ ಗಿಡ ನೆಡುವ ಕಾರ್ಯಕ್ರಮ ಮತ್ತು ಪರಿಸದ ಬಗ್ಗೆ ಅರಿವು ಮೂಡಿಸುವ ಹೆಲ್ತಿ ಕ್ಯಾಂಪನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಚಾರ್ಯ ಪಿ.ಎಸ್. ಜಾನ್ ಗಿಡಗಳಿಗೆ ನೀರು ಹಾಕುವದರ ಮೂಲಕ ನೆÀರವೇರಿಸಿದರು. ಈ ಸಂದರ್ಭ ಮಾತನಾಡಿದ ಕ್ಯಾಂಪಸ್ ಫ್ರಂಟ್‍ನ ಜಿಲ್ಲಾ ಕಾರ್ಯದರ್ಶಿ ತನ್ವಿಝ ಆಹ್ಮದ್ ದೇಶಕ್ಕೆ ಮಾಲಿನ್ಯ ರಹಿತ ಶುದ್ಧ ಗಾಳಿ ನೀರು ಅತ್ಯವಶ್ಯ. ಕಾಡನ್ನು ಉಳಿಸಿಕೊಳ್ಳಲು ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.

ಈ ಸಂದರ್ಭ ಕ್ಯಾಂಪಸ್ ಫ್ರಂಟ್ ಆಫ್ ಕೊಡಗು ಜಿಲ್ಲಾ ಸಮಿತಿ ಸದಸ್ಯರಾದ ಅಬ್ದುಲ್ ಸಲಾಂ, ಮುಸ್ತಾಫ, ಉಪನ್ಯಾಸಕರುಗಳಾದ ಈಶ, ಪಿಲಿಫ್‍ವಾಸ್, ಮಂಜುಳ, ಕವಿತ, ದಮಯಂತಿ, ಕವಿತಾ ಭಕ್ತ್, ಸುಕನ್ಯ ಹಾಗೂ ವಿದ್ಯಾರ್ಥಿಗಳು ಮತ್ತಿತರರು ಇದ್ದರು.