ನಾಪೆÇೀಕ್ಲು, ಜು. 3: ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡದಿದ್ದರೆ ಕೊಡಗನ್ನು ಪ್ರತ್ಯೇಕ ರಾಜ್ಯವನ್ನಾಗಿ ನೀಡಬೇಕು. ಈ ಬಗ್ಗೆ ಜಿಲ್ಲೆಯ ಜನತೆ ಜಾತಿ, ಮತ, ಧರ್ಮ, ಪಕ್ಷ ಬೇಧ ಮರೆತು ಹೋರಾಟಕ್ಕೆ ಸಿದ್ಧರಾಗಿದ್ದಾರೆ ಎಂದು ನಾಪೆÇೀಕ್ಲು ವ್ಯಾಪ್ತಿಯ ಕಾಫಿ ಬೆಳೆಗಾರರು ಸರಕಾರವನ್ನು ಎಚ್ಚರಿಸಿದ್ದಾರೆ.ಕಾಫಿ ಬೆಳೆಗಾರರ ಸಾಲ ಮನ್ನಾ ಇಲ್ಲ ಎಂಬ ವದಂತಿಗೆ ಸಂಬಂಧಿಸಿ ದಂತೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆಳೆಗಾರರಾದ ಎನ್.ಎಸ್. ಉದಯಶಂಕರ್, ಬಿದ್ದಾಟಂಡ ಜಿನ್ನು ನಾಣಯ್ಯ, ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಕೊಡಗಿನ ಬೆಳೆಗಾರರನ್ನು ಸಾಲ ಮನ್ನಾದಿಂದ ಬೇರ್ಪಡಿಸಿದರೆ ಕೊಡಗು ಜಿಲ್ಲೆಯನ್ನು ಕರ್ನಾಟಕದಿಂದ ಬೇರ್ಪಡಿಸಬೇಕಾಗುತ್ತದೆ ಎಂದರು. ಕೊಡಗಿನವರ ತೆರಿಗೆ, ಕೊಡಗಿನ ಜನರ ಬದುಕನ್ನು ಕಸಿದುಕೊಳ್ಳುವ ಮಳೆ ನೀರು ಸುಭದ್ರ ಸರಕಾರಕ್ಕೆ ಕಾರಣವಾಗುತ್ತದೆ. ಆದರೆ ಮಳೆಯ ಕಾರಣದಿಂದ ಕೊಡಗಿನ ರೈತರ, ಬೆಳೆಗಾರರ ಬೆಳೆ, ಆಸ್ತಿ, ಪಾಸ್ತಿ ನಷ್ಟಕ್ಕೆ ಸರಕಾರ ಪರಿಹಾರ ನೀಡಲು ಮೀನಾಮೇಷ ಎಣಿಸುತ್ತಿರುವದು ಸರಿಯೇ ಎಂದು ಅವರು ಪ್ರಶ್ನಿಸಿದರು.

ಕೊಡಗಿನ ಕಾಫಿ ಉದ್ಯಮ ಲಕ್ಷಾಂತರ ಕಾರ್ಮಿಕರ ಬದುಕಿಗೆ ಆಸರೆಯಾಗಿದೆ. ಆದರೆ 20 ವರ್ಷಗಳ ಹಿಂದಿರುವ ಕಾಫಿ ಧಾರಣೆ ಇಂದಿಗೂ ಇದೆ. ಆಗ ಇದ್ದ 60 ರೂ. ಕಾರ್ಮಿಕರ ಕೂಲಿ ಇಂದು 300 ರಿಂದ 700 ರೂ. ತಲುಪಿದೆ ಇದರಿಂದ ಕಾಫಿ ಬೆಳೆಗಾರರ ಬದುಕು ಶೋಚನೀಯ ಎಂಬಂತಾಗಿದೆ ಎಂದರು. 1956 ರಲ್ಲಿ ಕೊಡಗು ರಾಜ್ಯ ಕರ್ನಾಟಕದೊಂದಿಗೆ ವಿಲೀನಗೊಂಡ ಸಂದರ್ಭದಲ್ಲಿ ನಡೆದ ಒಡಂಬಡಿಕೆಯನ್ನು ಸರಕಾರ ಪರಿಶೀಲಿಸಿ ಅದರಂತೆ ನಡೆದು ಕೊಳ್ಳಬೇಕು. ಕೊಡಗು ಜಿಲ್ಲೆಯನ್ನು ಕಡೆಗಣಿಸುವದಾದರೆ ನಮಗೆ ಪ್ರತ್ಯೇಕ ರಾಜ್ಯ ನೀಡಬೇಕಾಗುತ್ತದೆ. ಅದಕ್ಕಾಗಿ ಯಾವದೇ ಹೋರಾಟಕ್ಕೂ ನಾವು ಸಿದ್ದ ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಬೆಳೆಗಾರರಾದ ಪಟ್ರಪಂಡ ಮೋಹನ್ ಮುದ್ದಪ್ಪ, ಶಿವಚಾಳಿಯಂಡ ಜಗದೀಶ್, ಎಂ.ಎ. ಮನ್ಸೂರ್ ಅಲಿ, ಕಂಗಾಂಡ ಜಾಲಿ ಪೂವಪ್ಪ, ಪಾಡಿಯಮ್ಮಂಡ ಮನು ಮಹೇಶ್, ನೆಡುಮಂಡ ಕೃತಿ ಇದ್ದರು.