ಗೋಣಿಕೊಪ್ಪ ವರದಿ, ಜೂ. 20: ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ರೈತರೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮವನ್ನು ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪರದೆ ಮುಖಾಂತರ ಬಿತ್ತರಿಸಲಾಯಿತು.

ಪ್ರೊಜೆಕ್ಟರ್ ಮೂಲಕ ಎಲ್‍ಸಿಡಿ ಪರದೆಯಲ್ಲಿ ನೇರ ಪ್ರಸಾರವನ್ನು ನೀಡಲಾಯಿತು. ಕೊಡಗಿನ ಸುಮಾರು 113 ಬೆಳೆಗಾರರು ವೀಕ್ಷಿಸಿದರು. ವೀರಾಜಪೇಟೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರದ ತಜ್ಞರುಗಳು ಪಾಲ್ಗೊಂಡಿದ್ದರು. ಕೆವಿಕೆ ಮುಖ್ಯಸ್ಥ ಸಾಜು ಜಾರ್ಜ್, ರೈತ ಸಂಘ ಪ್ರ. ಕಾರ್ಯದರ್ಶಿ ಸುಜಯ್ ಬೋಪಯ್ಯ, ಕೃಷಿ ಪಂಡಿತ ಪ್ರಶಸ್ತಿ ಪುರಸ್ಕøತ ಸೋಮೇಂಗಡ ಗಣೇಶ್ ತಿಮ್ಮಯ್ಯ, ಕೃಷಿಕರುಗಳಾದ ರಾಣಾ ನಂಜಪ್ಪ, ಸೋಮಯ್ಯ, ರಾಬಿನ್ ಸುಬ್ಬಯ್ಯ ಸೇರಿದಂತೆ ರೈತರು ವೀಕ್ಷಿಸಿದರು.