ಕೂಡಿಗೆ, ಜೂ. 20: ಕಣಿವೆಯ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಲಿರುವ ಕೆ.ಎ. ಪದ್ಮಾವತಿ ಅವರನ್ನು ಕಣಿವೆಯ ಅನಿತಾ ಸ್ತ್ರೀಶಕ್ತಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಕೆ.ಎ. ಪದ್ಮಾವತಿ ಅವರು ಅನಿತಾ ಸ್ತ್ರೀ ಶಕ್ತಿ ಸಂಘದ ಸದಸ್ಯರಾಗಿದ್ದು, ಸಂಘವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲು ಸಹಕಾರಿ ಹಾಗೂ ಸಂಘದ ಬೆಳವಣಿಗೆಗೆ ದುಡಿದಿರುವ ಹಿನ್ನೆಲೆ ಹಾಗೂ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಲಿರುವ ಹಿನ್ನೆಲೆ ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷೆ ಗೀತ ಹಾಗೂ ಸದಸ್ಯರು ಇದ್ದರು.