ಮಡಿಕೇರಿ, ಜೂ.19 : ಕೊಡವ ಬುಡಕಟ್ಟು ಸಮುದಾಯವನ್ನು ಸಂವಿಧಾನದ ಪಟ್ಟಿಯಡಿಯಲ್ಲಿ ಸೇರಿಸುವ ಸಲುವಾಗಿ ಹಿಂದಿನ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಮೌಖಿಕ ಆದೇಶದ ಮೂಲಕ ತಡೆ ಮಾಡಲ್ಪಟ್ಟಿದ್ದ ಕೊಡವರ ಸಮಗ್ರ ಕುಲಶಾಸ್ತ್ರ (ಎಥ್ನೋಗ್ರಾಫಿಕ್) ಅಧ್ಯಯನವನ್ನು ಇಂದಿನ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಮುಂದುವರಿಸಬೇಕೆಂದು ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಮುಖ ಬೇಡಿಕೆಯನ್ನು ಮುಂದಿಟ್ಟುಕೊಂಡು ಜೂನ್ 22 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವದೆಂದು ತಿಳಿಸಿದರು.

ಕೊಡವ ಸಮುದಾಯವನ್ನು ಸÀಂವಿಧಾನದ ಶೆಡ್ಯೂಲ್ ಪಟ್ಟಿಯ 340-342ರ ಅಡಿಯಲ್ಲಿ ಸೇರಿಸುವ ಮೂಲಕ ಅವರ ಆಂತರಿಕ ರಾಜಕೀಯ ಸ್ವಯಂ ನಿರ್ಣಯ ಹಕ್ಕು, ರಾಜಕೀಯ-ಆರ್ಥಿಕ ಸ್ವಾತಂತ್ರ್ಯ ಒದಗಿಸಬೇಕೆಂದು ಸಿಎನ್‍ಸಿ

ಮಡಿಕೇರಿ, ಜೂ.19 : ಕೊಡವ ಬುಡಕಟ್ಟು ಸಮುದಾಯವನ್ನು ಸಂವಿಧಾನದ ಪಟ್ಟಿಯಡಿಯಲ್ಲಿ ಸೇರಿಸುವ ಸಲುವಾಗಿ ಹಿಂದಿನ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಮೌಖಿಕ ಆದೇಶದ ಮೂಲಕ ತಡೆ ಮಾಡಲ್ಪಟ್ಟಿದ್ದ ಕೊಡವರ ಸಮಗ್ರ ಕುಲಶಾಸ್ತ್ರ (ಎಥ್ನೋಗ್ರಾಫಿಕ್) ಅಧ್ಯಯನವನ್ನು ಇಂದಿನ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಮುಂದುವರಿಸಬೇಕೆಂದು ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಮುಖ ಬೇಡಿಕೆಯನ್ನು ಮುಂದಿಟ್ಟುಕೊಂಡು ಜೂನ್ 22 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವದೆಂದು ತಿಳಿಸಿದರು.

ಕೊಡವ ಸಮುದಾಯವನ್ನು ಸÀಂವಿಧಾನದ ಶೆಡ್ಯೂಲ್ ಪಟ್ಟಿಯ 340-342ರ ಅಡಿಯಲ್ಲಿ ಸೇರಿಸುವ ಮೂಲಕ ಅವರ ಆಂತರಿಕ ರಾಜಕೀಯ ಸ್ವಯಂ ನಿರ್ಣಯ ಹಕ್ಕು, ರಾಜಕೀಯ-ಆರ್ಥಿಕ ಸ್ವಾತಂತ್ರ್ಯ ಒದಗಿಸಬೇಕೆಂದು ಸಿಎನ್‍ಸಿ ಕೇರಳವನ್ನು ಸಂಪರ್ಕಿಸುವ ರೈಲ್ವೆ ಮಾರ್ಗದ ಯೋಜನೆಯನ್ನೇ ಸಂಪೂರ್ಣವಾಗಿ ಕೈಬಿಡಬೇಕೆಂದು ಆಗ್ರಹಿಸಿದ ಎನ್.ಯು.ನಾಚಪ್ಪ ಪರಿಸರ ವಿರೋಧಿ ಯೋಜನೆಗಳಿಂದ ಕೊಡಗನ್ನು ಸಂರಕ್ಷಿಸಲು ಕೊಡವ ಲ್ಯಾಂಡ್ ಸ್ವಾಯತ್ತತೆಯೊಂದಿಗೆ ಕೊಡಗು ಕೇಂದ್ರಾಡಳಿತ ಪ್ರದೇಶವಾಗಿ ಪರಿಗಣಿಸಲ್ಪಡುವದೊಂದೇ ಪರಿಹಾರವೆಂದು ಅಭಿಪ್ರಾಯಪಟ್ಟರು.

ಕೊಡಗಿನಲ್ಲಿ ರೈಲ್ವೆ ಯೋಜನೆಯನ್ನು ವಿರೋಧಿಸಿ ಕೇಂದ್ರ

ತಾ.22 ರಂದು ಸಿಎನ್‍ಸಿ ಧರಣಿ

ರೈಲ್ವೆ ಮಂತ್ರಿ ಪಿಯೂಸ್ ಗೋಯಲ್ ಅವರಿಗೆ ಸಿ.ಎನ್.ಸಿ. ಜ್ಞಾಪನಾ ಪತ್ರ ಸಲ್ಲಿಸಿದೆ. ಕೊಡಗನ್ನು ರೈಲ್ವೆ ವ್ಯಾಪ್ತಿಗೆ ಒಳಪಡಿಸುವ ಕಾರ್ಯ 1960ರ ದಶಕದಲ್ಲೇ ನಡೆದಿತ್ತೆಂದು ಟೀಕಿಸಿದ ನಾಚಪ್ಪ, ಈ ಎಲ್ಲಾ ವಿಚಾರಗಳಿಗೆ ಕೊಡಗು ರಾಜ್ಯ ಮತ್ತು ಭಾರತ ಸರಕಾರದಲ್ಲಿ ಅತ್ಯುಚ್ಛ ಅಧಿಕಾರ ಅನುಭವಿಸಿದ ರಾಜಕಾರಣಿಯೊಬ್ಬರು ಕಾರಣರೆಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಚೆಂಬಂಡ ಜನತ್, ಬೇಪಡಿಯಂಡ ಬಿದ್ದಪ್ಪ, ಪುಲ್ಲೇರ ಕಾಳಪ್ಪ ಮತ್ತು ಕಾಟುಮಣಿಯಂಡ ಉಮೇಶ್ ಉಪಸ್ಥಿತರಿದ್ದರು.