ವೀರಾಜಪೇಟೆ, ಜೂ.19: ವೀರಾಜಪೇಟೆ ಬಳಿಯ ಆರ್ಜಿ ಗ್ರಾಮದ ಸಂಜೀವ ಎಂಬವರ ಪತ್ನಿ ಲಕ್ಷ್ಮಿ(69) ಮಾರ್ಚ್ 3 ರಂದು ಅಪರಾಹ್ನ 1 ಗಂಟೆಗೆ ಮನೆಯಲ್ಲಿ ಊಟ ಮಾಡಿ ತೆರಳಿದವರು ಇಲ್ಲಿಯವರೆಗೂ ಹಿಂತಿರುಗಿಲ್ಲ. ಅವರು ಮಾನಸಿಕ ಅಸ್ವಸ್ಥೆಯಾಗಿದ್ದಾರೆ ಎಂದು ಪತಿ ಸಂಜೀವ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ನಗರ ಪೊಲೀಸರು ಇಂದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.