ತಿರುವನಂತಪುರ, ಜೂ. 14: ಕೇರಳದ ಉತ್ತರ ಭಾಗದಲ್ಲಿ ಭಾರೀ ಮಳೆ ಬೀಳುತ್ತಿದ್ದು, ಪ್ರವಾಹ ಹಾಗೂ ಭೂಕುಸಿತ ಉಂಟಾಗಿ ಗುರುವಾರ ಮೂವರು ಮಕ್ಕಳು ಸೇರಿ ನಾಲ್ವರು ಮೃತಪಟ್ಟು, 10 ಮಂದಿ ಕಣ್ಮರೆಯಾಗಿದ್ದಾರೆ. ಬುಧವಾರ ಇಡೀ ರಾತ್ರಿ ಬಿದ್ದ ಭಾರೀ ಮಳೆಗೆ ಕೋಯಿಕ್ಕೊಡ್ ಜಿಲ್ಲೆಯ ಗ್ರಾಮವೊಂದರಲ್ಲಿ ಬೆಳಿಗ್ಗೆ ಭೂಕುಸಿತ ಉಂಟಾದ ಘಟನೆ ನಡೆದಿದ್ದು, ನಾಲ್ವರು ಸಾವಿಗೀಡಾಗಿ, 10 ಜನ ಕಣ್ಮರೆಯಾಗಿದ್ದಾರೆ ಎಂದು ವರದಿಯಾಗಿದೆ. ಮೇ ಕೊನೆಯ ವಾರ ನೈಋತ್ಯ ಮುಂಗಾರು ಆರಂಭವಾದ ಬಳಿಕ, ಇಲ್ಲಿಯವರೆಗೆ ರಾಜ್ಯದಲ್ಲಿ ಮೃತರ ಸಂಖ್ಯೆ 27ಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂ ಕುಸಿತವಾದ ಗ್ರಾಮದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಕಣ್ಮರೆಯಾದವರಿಗಾಗಿ ಶೋಧ ನಡೆದಿದೆ.
ಪತ್ರಕರ್ತನ ಮೇಲೆ ಗುಂಡಿನ ಧಾಳಿ
ಶ್ರೀನಗರ, ಜೂ. 14: ಶ್ರೀನಗರದಲ್ಲಿ ಕಾಶ್ಮೀರಿ ಪತ್ರಕರ್ತ ಶುಜಾತ್ ಬುಖಾರಿ ಮೇಲೆ ಗುಂಡಿನ ಧಾಳಿ ನಡೆದಿದ್ದು, ಗನ್ ಮ್ಯಾನ್ ಧಾಳಿ ನಡೆಸಿದ್ದಾನೆ. ಪ್ರೆಸ್ ಕಾಲೋನಿಯಲ್ಲಿ ಶುಜಾತ್ ಬುಖಾರಿ ಮೇಲೆ ಧಾಳಿ ನಡೆದಿದೆ. ಪತ್ರಕರ್ತ ಬುಖಾರಿ ಹಾಗೂ ಇಬ್ಬರು ಭದ್ರತಾ ಗಾರ್ಡ್ಗಳು ಘಟನೆಯಲ್ಲಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಧಾನಿಯಿಂದ ನಕ್ಸಲರಿಗೆ ಸ್ಪಷ್ಟ ಸಂದೇಶ
ಛತ್ತೀಸಘಡ, ಜೂ. 14: ಹಿಂಸಾಚಾರ ತಡೆಗೆ ಉತ್ತರ ನೀಡುವದಾದರೆ ಅದು ಅಭಿವೃದ್ಧಿಯೊಂದೇ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಈ ಮೂಲಕ ಪ್ರಧಾನಿ, ಛತ್ತೀಸಗಡದಲ್ಲಿ ವಿದ್ವಂಸಕ ಕೃತ್ಯಗಳೊಂದಿಗೆ ಹಿಂಸಾಚಾರಕ್ಕೆ ತೊಡಗುವ ನಕ್ಸಲರಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದರು. ಛತ್ತೀಸಘಡದಲ್ಲಿ ಪ್ರಸಕ್ತ ವರ್ಷ ನಡೆದ ಚುನಾವಣೆ ಬಳಿಕ ಕೈಗೊಳಲಾಗುತ್ತಿರುವ ರೂ. 22 ಸಾವಿರ ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಗುರುವಾರ ಚಾಲನೆ ನೀಡಿದ ಬಳಿಕ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. ತಮ್ಮ ಸರ್ಕಾರ ವಿಶ್ವಾಸದ ವಾತಾವರಣವನ್ನು ಸೃಷ್ಟಿಸುತ್ತಿದೆ ಎಂದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿ ಮಾಡಿದ ಮೋದಿ, ಯಾವದೇ ರೀತಿಯ ಹಿಂಸಾಚಾರ ಮತ್ತು ಪಿತೂರಿಗಳ ತಡೆಗೆ ಅಭಿವೃದ್ಧಿಯೊಂದೇ ಉತ್ತರವಾಗಬಲ್ಲದು ಎಂದು ನಾನು ಭಾವಿಸಿದ್ದೇನೆ. ಈ ರೀತಿ ಹೊರಹೊಮ್ಮುವ ನಂಬಿಕೆಯು ಯಾವದೇ ಬಗೆಯ ಹಿಂಸಾಚಾರವನ್ನು ಕೊನೆಗೊಳಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಛತ್ತೀಸಘಡ ನಕ್ಸಲ್ ದಂಗೆಕೋರರಿಂದಾಗಿ ಅತಿ ದೊಡ್ಡ ಹಿಂಸೆಗೆ ಸಾಕ್ಷಿಯಾಗುತ್ತಿದೆ ಎಂಬ ಅಭಿಪ್ರಾಯಗಳು ಹೆಚ್ಚು ಮಹತ್ವ ಪಡೆಯುತ್ತಿರುವ ಈ ಸಂದರ್ಭ ವಿಶ್ವಾಸದ ವಾತಾವರಣ ಸೃಷ್ಟಿಸುವ ಕುರಿತು ಮಾತನಾಡಿದ ಮೋದಿ, ಖನಿಜಗಳಂತಹ ನೈಸರ್ಗಿಕ ಸಂಪನ್ಮೂಗಳಿಂದ ಗಳಿಸುವ ಹೆಚ್ಚಿನ ಭಾಗವನ್ನು ಸ್ಥಳೀಯರ ಕಲ್ಯಾಣ ಕಾರ್ಯಗಳಿಗೆ ಸರ್ಕಾರ ವೆಚ್ಚ ಮಾಡಲಿದೆ ಎಂದು ಭರವಸೆ ನೀಡಿದರು.
ಪುಲ್ವಾಮದಲ್ಲಿ ಯೋಧನ ಅಪಹರಣ
ಜಮ್ಮು-ಕಾಶ್ಮೀರ, ಜೂ. 14: ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಸಮೀರ್ ಟೈಗರ್ ಎನ್ಕೌಂಟರ್ನಲ್ಲಿ ಭಾಗಿಯಾಗಿದ್ದ ಸೇನೆಯ ಯೋಧರೊಬ್ಬರು ಪುಲ್ವಾಮ ಎಂಬಲ್ಲಿ ಅಪಹರಣಕ್ಕೊಳಗಾಗಿದ್ದಾರೆ. ಅಪಹೃತ ಯೋಧರನ್ನು ಔರಂಗಜೇಬ್ ಎಂದು ಗುರುತಿಸಲಾಗಿದ್ದು, ಇವರು ಪೂಂಚ್ ಎಂಬಲ್ಲಿ ನೆಲೆಸಿದ್ದಾರೆ. ಇವರು 44 ರಾಷ್ಟ್ರೀಯ ರೈಫಲ್ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಶೋಪಿಯಾನ್ನಲ್ಲಿ ಭಯೋತ್ಪಾದನಾ ನಿಗ್ರಹ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು. ಯೋಧ ಔರಂಗಜೇಬ್ ಕೆಲಸ ಮುಗಿಸಿ ಖಾಸಗಿ ಬಸ್ನಲ್ಲಿ ಮನೆಗೆ ಹೋಗುತ್ತಿದ್ದರು.ಈ ವೇಳೆ ಯೋಧ ತೆರಳುತ್ತಿದ್ದ ಬಸ್ಸನ್ನು ಅಡ್ಡಗಟ್ಟಿದ ಶಸ್ತ್ರಸಜ್ಜಿತ ಉಗ್ರರ ಗುಂಪು ಅವರನ್ನು ಅಪಹರಿಸಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಜಮ್ಮು-ಕಾಶ್ಮೀರ ಪೆÇಲೀಸರು ಈಗಾಗಲೇ ತನಿಖೆ ಕೈಗೊಂಡಿದ್ದಾರೆ.
ಸೇನೆ ಧಾಳಿ : ಇಬ್ಬರು ಉಗ್ರರು ಬಲಿ
ಜಮ್ಮು, ಜೂ. 14: ಜಮ್ಮು-ಕಾಶ್ಮೀರದ ಬಂದಿಪೆÇೀರಾ ಜಿಲ್ಲೆಯಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಈ ವೇಳೆ ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ಇದೇ ವೇಳೆ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಕೈಗೊಂಡ ಭಾರತೀಯ ಪಡೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ. ಬಂದೀಪೆÇೀರಾ ಜಿಲ್ಲೆಗೆ ಹೊಂದಿಕೊಂಡಂತೆ ಪನಾರ್ ಅರಣ್ಯದಲ್ಲಿ ಉಗ್ರರು ಬೀಡು ಬಿಟ್ಟಿರುವ ವಿಷಯ ತಿಳಿದ ಪಡೆ ಕಾರ್ಯಾಚರಣೆ ಕೈಗೊಂಡಿತ್ತು. ಉಗ್ರರು ಅಡಗಿರುವ ಶಂಕೆ ವ್ತಕ್ತವಾಗಿದ್ದು, ಸಿಆರ್ಪಿಎಫ್ ಮತ್ತು ರಾಷ್ಟ್ರೀಯ ರೈಫಲ್ಸ್ ಪಡೆ ಕಾರ್ಯಾಚರಣೆ ಮುಂದುವರೆಸಿದೆ.
ನಲಪಾಡ್ಗೆ ಷರತ್ತುಬದ್ಧ ಜಾಮೀನು
ಬೆಂಗಳೂರು, ಜೂ. 14: ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಸೆರೆವಾಸ ಅನುಭವಿಸುತ್ತಿರುವ ಮೊಹಮದ್ ನಲಪಾಡ್ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರಿದ್ದ ಏಕಸದಸ್ಯ ನ್ಯಾಯಪೀಠವು ವಿಚಾರಣೆ ನಡೆಸಿತ್ತು. ಬೆಂಗಳೂರಿನ ಯು.ಬಿ.ಸಿ.ಟಿ.ಯ ಫರ್ಜಿ ಕೆಫೆಯಲ್ಲಿ ನಲಪಾಡ್ ಹಾಗೂ ಅವರ ಏಳು ಸಹಚರರು ಫೆಬ್ರುವರಿ 17 ರಂದು ವಿದ್ವತ್ ಮೇಲೆ ಜಗ್, ಬಾಟಲಿ ಹಾಗೂ ಕಬ್ಬಿಣದ ರಿಂಗ್ಗಳಿಂದ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ಫೆಬ್ರವರಿ 19 ರಂದು ನಲಪಾಡ್ ಅವರನ್ನು ಪೆÇಲೀಸರು ಬಂಧಿಸಿದ್ದರು.