ಗೋಣಿಕೊಪ್ಪಲು,ಜೂ.11: ಭಾರತದ ಸಂವಿಧಾನದಲ್ಲಿ ವಿವಿಧ ಧಾರ್ಮಿಕ ಹಬ್ಬಗಳ ಆಚರಣೆಗೆ ಅವಕಾಶವಿದ್ದು, ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಕ್, ಪಾರ್ಸಿ ಒಳಗೊಂಡಂತೆ ಯಾವದೇ ಧರ್ಮೀಯರು ತಮ್ಮ ತಮ್ಮ ಹಬ್ಬ, ಆಚರಣೆಗಳನ್ನು ಶಾಂತಿ ಸೌಹಾರ್ದಯುತವಾಗಿ ಆಚರಿಸಲು ಯಾವದೇ ಅಡ್ಡಿ ಇಲ್ಲ ಎಂದು ಗೋಣಿಕೊಪ್ಪಲು ಪೆÇಲೀಸ್ ವೃತ್ತ ನಿರೀಕ್ಷಕ ಹರಿಶ್ಚಂದ್ರ ಅವರು ವಿವರಿಸಿದರು.

ಗೋಣಿಕೊಪ್ಪಲು ಆರಕ್ಷಕ ಠಾಣೆಯಲ್ಲಿ ಇಂದು ಬೆಳಿಗ್ಗೆ ರಂಜಾನ್ ಹಬ್ಬದ ಪ್ರಯುಕ್ತ ಜರುಗಿದ ವಿವಿಧ ಧಾರ್ಮಿಕ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಗೋಣಿಕೊಪ್ಪಲು ನಗರ ವ್ಯಾಪ್ತಿಯಲ್ಲಿ ನಾಲ್ಕು ಮಸೀದಿಗಳು ಇದ್ದು, ಯಾವದೇ ಮೆರವಣಿಗೆಗೆ ಮೊದಲೇ ಅನುಮತಿ ಅಗತ್ಯ. ಸೂಕ್ತ ಭದ್ರತೆ ಒದಗಿಸುವದಾಗಿ ಹೇಳಿದರು.

ಗೋಣಿಕೊಪ್ಪಲು ನಗರದಲ್ಲಿ ಎಲ್ಲ ಧರ್ಮೀಯರು ಒಗ್ಗಟ್ಟಾಗಿದ್ದು, ಈವರೆಗೂ ಯಾವದೇ ಅಹಿತಕರ ಘಟನೆ ನಡೆದಿಲ್ಲ. ಹಬ್ಬಗಳನ್ನು ಶಾಂತಿ ಸೌಹಾರ್ದತೆ, ಪ್ರೀತಿ ವಿಶ್ವಾಸದೊಂದಿಗೆ ಆಚರಿಸುವಂತಾಗಬೇಕು. ಕಾನೂನು ಬಾಹಿರ ಚಟುವಟಿಕೆ, ಪ್ರಚೋದನೆಗೆ ಅವಕಾಶ ನೀಡಬಾರದು. ಎಲ್ಲ ಧಾರ್ಮಿಕ ಮುಖಂಡರ ಸಹಕಾರ ದೊಂದಿಗೆ ಸಾರ್ವಜನಿಕ ಶಾಂತಿ ಭಂಗವಾಗದಂತೆ ಹಬ್ಬ ಆಚರಣೆ ನಡೆಯಲಿ ಎಂದು ಶುಭ ಹಾರೈಸಿದರು.

ಗೋಣಿಕೊಪ್ಪಲು ಪೆÇಲೀಸ್ ಉಪನಿರೀಕ್ಷಕ ಎಚ್.ಸುಬ್ಬಯ್ಯ ಅವರು ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿ, ಪವಿತ್ರ ರಂಜಾನ್ ಆಚರಣೆ ತಾ.15 ಅಥವಾ 16 ರಂದು ನಡೆಯಲಿದ್ದು ಧಾರ್ಮಿಕ ಆಚರಣೆಗೆ ಪ್ರತೀ ವ್ಯಕ್ತಿಗೂ ಸಂವಿಧಾನಾತ್ಮಕ ಹಕ್ಕು ಇದ್ದು ಶಾಂತಿಯುತವಾಗಿ ಆಚರಿಸಲು ಮನವಿ ಮಾಡಿದರು. ಇದೇ ಸಂದರ್ಭ ಹನಫಿ ಜಾಮೀಯ ಮಸೀದಿಯ ಅಧ್ಯಕ್ಷ ಬಿ.ಮುನೀಬ್ ಮಾತನಾಡಿ, ಶುಕ್ರವಾರ ಅಥವಾ ಶನಿವಾರ ಹಬ್ಬ ಆಚರಿಸಲ್ಪಡುವ ಸಂದರ್ಭ ಸುಮಾರು 200 ಮಂದಿಯ ಮೆರವಣಿಗೆಗೆ ಅವಕಾಶ ಮಾಡಿಕೊಡಲು ಮನವಿ ಮಾಡಿದರು.

ಶಾಫಿ ಜುಮಾ ಮಸೀದಿಯ ಕಾರ್ಯದರ್ಶಿ ಅಬ್ದುಲ್ ಸಲಾಂ ಮಾತನಾಡಿ ಹಬ್ಬದ ದಿನ ಗೋಣಿಕೊಪ್ಪಲು, ಅರುವತ್ತೊಕ್ಕಲು ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಮಸೀದಿ ಮುಂಭಾಗ ಉಂಟಾಗಲಿದ್ದು ಪೆÇಲೀಸರ ಸಹಕಾರ ಕೋರಿದರು. ಇದೇ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ ಅವರು ರಂಜಾನ್ ಹಬ್ಬಕ್ಕೆ ಧಾರ್ಮಿಕ ಮುಖಂಡರಿಗೆ ಶುಭಕೋರಿದರು. ಸಭೆಯಲ್ಲಿ ಸುಬ್ರಮಣಿ, ರಾಮಕೃಷ್ಣ, ವಿಶ್ವ ಹಿಂದೂ ಪರಿಷತ್ ನಗರಾಧ್ಯಕ್ಷ ಪೆÇನ್ನಪ್ಪ, ಗ್ರಾ.ಪಂ.ಸದಸ್ಯೆ ಯಾಸ್ಮೀನ್, ಟಿ.ಎಲ್.ಶ್ರೀನಿವಾಸ್ ಮುಂತಾದವರು ಮಾತನಾಡಿದರು. ಸಭೆಯಲ್ಲಿ ಜಪ್ಪು ಸುಬ್ಬಯ್ಯ,ಶೌಕತ್ ಆಲಿ, ಎಂ.ಕೆ.ಆಬೂಟಿ, ಶಾಹೀನ್, ಪೆÇಲೀಸ್ ಮಂಜು ಮುಂತಾದವರು ಉಪಸ್ಥಿತರಿದ್ದರು. ಪೂವಣ್ಣ ವಂದಿಸಿದರು.