ಗೋಣಿಕೊಪ್ಪ ವರದಿ, ಜೂ.11 : ಕಾಫಿ ತೋಟದಲ್ಲಿ ಸೇರಿಕೊಂಡಿರುವ ಕಾಡಾನೆಗಳ ಹಿಂಡಿನಿಂದ ವಿ. ಬಾಡಗದಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.

ಗ್ರಾಮದ ತೀತಿಮಾಡ ಕುಟುಂಬದ ಕಾಫಿ ತೋಟದಲ್ಲಿ ಕಾಫಿ, ಬಾಳೆ, ತೆಂಗು, ಅಡಿಕೆ ಬೆಳೆಗಳನ್ನು ನಾಶ ಮಾಡಿವೆ. ತೀತಿಮಾಡ ಚಿಣ್ಣಪ್ಪ, ಅಯ್ಯಪ್ಪ, ಕರುಂಬಯ್ಯ ಎಂಬವರ ತೋಟದಲ್ಲಿ ಹಾನಿ ಮಾಡಿದೆ. ಚಿಣ್ಣಪ್ಪ ಎಂಬುವವರ ತೋಟದ ಕಾಫಿ ಗಿಡಗಳು ಬುಡ ಸಮೇತ ಮಗುಚಿಕೊಂಡಿದೆ. ಕಾಫಿ ಗಿಡವನ್ನು ತಿನ್ನದಿದ್ದರೂ ರೋಷÀದಿಂದ ಹೀಗೆ ಮಾಡಿದೆ. ಬಾಳೆ ಗಿಡಗಳನ್ನು ಸಂಪೂರ್ಣವಾಗಿ ತಿಂದು ಹಾಕಿವೆ.

ಧಾರಾಕಾರವಾಗಿ ಮಳೆ ಸುರಿಯುತ್ತಿರುವದರಿಂದ ಬೆಳೆಗಾರರು ತೋಟದತ್ತ ತೆರಳುತ್ತಿಲ್ಲ. ಆನೆಗಳು ತೋಟದಲ್ಲಿಯೇ ಬೀಡುಬಿಟ್ಟಿವೆ. ಇದರಿಂದಾಗಿ ಆತಂಕ ಹೆಚ್ಚಾಗಿದೆ. ಒಂದು ವಾರದ ಹಿಂದಷ್ಟೆ ಮಾಕುಟ್ಟ ಅರಣ್ಯ ವಲಯದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಾಡಿಗೆ ಅಟ್ಟಿದ್ದರು. ಮತ್ತೆ 8ಕ್ಕೂ ಹೆಚ್ಚು ಆನೆಗಳು ಮರಿಗಳೊಂದಿಗೆ ಧಾಳಿ ಇಡುತ್ತಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.