ಕುಶಾಲನಗರ, ಜೂ. 7: ಕುಶಾಲನಗರದ ಪಟ್ಟಣದ ವಿವಿಧೆಡೆ ಸೂಚನಾ ಫಲಕ ಹಾಗೂ ಮಾರ್ಗಸೂಚಿ ಫಲಕಗಳನ್ನು ಅಳವಡಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ರವರ ಸೂಚನೆಯಂತೆ ಡಿವೈಎಸ್ಪಿ ಶ್ರೀನಿವಾಸಮೂರ್ತಿ ಹಾಗೂ ವೃತ್ತನಿರೀಕ್ಷಕ ಕ್ಯಾತೆ ಗೌಡರ ಮಾರ್ಗದರ್ಶನದಲ್ಲಿ ನಗರದ ರಥಬೀದಿ ಹಾಗೂ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಸಂಚಾರಿ ಪೋಲಿಸ್ ಠಾಣೆಯ ಪ್ರಭಾರ ಠಾಣಾಧಿಕಾರಿಗಳಾದ ನವೀನ ಗೌಡ ನೇತೃತ್ವದಲ್ಲಿ ಸೂಚನಾ ಫಲಕ ಹಾಗೂ ಮಾರ್ಗಸೂಚಿ ನಾಮಫಲಕಗಳ ಅಳವಡಿಕೆ ಕಾರ್ಯ ನಡೆಯಿತು.

ಈ ಸಂದರ್ಭ ಸಂಚಾರಿ ಪೊಲೀಸ್ ಠಾಣೆಯ ಪೇದೆಗಳಾದ ಎಚ್ .ಆರ್. ಶ್ರೀನಿವಾಸ್, ಶಶಿಕುಮಾರ್, ಬಿಜ್ಜಳ, ಠಾಣಾ ಸಹಾಯಕ ಮುನೀರ್, ಗೃಹರಕ್ಷಕ ದಳದ ಸಿಬ್ಬಂದಿ ಹರೀಶ್ ಇದ್ದರು.