ಮಡಿಕೇರಿ, ಜೂ. 7: ಅನಾರೋಗ್ಯಕ್ಕೀಡಾಗಿದ್ದ ಪೊಲೀಸ್ ಮುಖ್ಯಪೇದೆಯೋರ್ವರು ಮನೆಯಲ್ಲಿ ಮಲಗಿದಲ್ಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಮೂಲತಃ ಸುಂಟಿಕೊಪ್ಪ ನಿವಾಸಿ, ಮಡಿಕೇರಿ ನಗರ ಠಾಣೆಯಲ್ಲಿ ಮುಖ್ಯಪೇದೆಯಾಗಿ ಕೆಲಸ ನಿರ್ವಹಿಸುತ್ತಿದ್ದ ಸುರೇಶ್ (45) ಎಂಬವರು ಕಳೆದ ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದು, ಮೊನ್ನೆ ದಿನ ಮೈತ್ರಿ ಬಳಿ ಇರುವ ತಮ್ಮ ಪೊಲೀಸ್ ವಸತಿ ಗೃಹದಲ್ಲಿ ಮಲಗಿದ್ದಾರೆ. ಇಂದು ನೋಡುವಾಗ ಅವರು ಮೃತಪಟ್ಟಿರುವದು ಗೋಚರಿಸಿದೆ. ಮೃತರು ಅವಿವಾಹಿತರಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.