ಮಡಿಕೇರಿ, ಜೂ. 6: ಇಲ್ಲಿನ ಚಿಕ್ಕಪೇಟೆಯಲ್ಲಿರುವ ಶೆಟ್ಟಿ ಫುಡ್ಸ್ ಬೇಕರಿಯಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡು ಬೇಕರಿ ತಿಂಡಿ, ತಿನಿಸುಗಳು ಕರಕಲಾಗಿವೆ.

ಇಂದು ನಸುಕಿನಲ್ಲಿ 4.15ರ ವೇಳೆಗೆ ನಗರ ಠಾಣಾ ಸಹಾಯಕ ಠಾಣಾಧಿಕಾರಿಗಳಾದ ಕುಶಾಲಪ್ಪ, ಸುಬ್ಬಯ್ಯ, ಚಾಲಕ ಮೋಹನ್ ಅವರುಗಳು ಗಸ್ತು ತಿರುಗುತ್ತಿದ್ದ ವೇಳೆ ಬೇಕರಿಯೊಳಗಿಂದ ಹೊಗೆ ಬರುತ್ತಿರುವದನ್ನು ಗಮನಿಸಿದ್ದಾರೆ. ಕೂಡಲೇ ಬೇಕರಿ ಮಾಲೀಕ ಕೃಷ್ಣಶೆಟ್ಟಿ ಅವರಿಗೆ ಕರೆ ಮಾಡಿದಾಗ ಕೀಲ ಕೈ ಕೆಲಸಗಾರನ ಕೈಯಲ್ಲಿರುವದಾಗಿ ಹೇಳಿದ್ದಾರೆ. ಒಡನೇ ಪೊಲೀಸರು ಅಗ್ನಿಶಾಮಕ ದಳದವರಿಗೆ ಸುದ್ದಿ ಮುಟ್ಟಿಸಿ ಬೇಕರಿಯ ಬೀಗ ಮುರಿದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೇಕರಿಯ ಸನಿಹದಲ್ಲಿಯೇ ಪೆಟ್ರೋಲ್ ಬಂಕ್ ಇದ್ದು, ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ಭಾರೀ ಅನಾಹುತ ತಪ್ಪಿದಂತಾಗಿದೆ.