ಶನಿವಾರಸಂತೆ, ಜೂ. 6: ಬೀಗ ಹಾಕಿದ್ದ ಮನೆಗೆ ನುಗ್ಗಿದ ಕಳ್ಳರು ಬೀರುವಿನಲ್ಲಿ ಇಟ್ಟಿದ್ದ ರೂ. 60 ಸಾವಿರ ಮೌಲ್ಯದ ಚಿನ್ನಾಭರಣ ಹಾಗೂ ರೂ. 75 ಸಾವಿರ ನಗದನ್ನು ಕಳವು ಮಾಡಿದ ಘಟನೆ ಸಮೀಪದ ಗೋಪಾಲಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಆಟೋ ಚಾಲಕ ಜಿ.ಟಿ. ಪ್ರಕಾಶ್ ಅವರ ಪತ್ನಿ ಹಾಗೂ ಮಗ ಸಂಬಂಧಿಕರ ಮನೆಗೆ ತೆರಳಿದ್ದ ಇವರು ಆಟೋ ಬಾಡಿಗೆ ಮಾಡಲೆಂದು ಶನಿವಾರಸಂತೆಗೆ ಹೋಗುವಾಗ ಮನೆಗೆ ಬೀಗ ಹಾಕಿ ಕೀಯನ್ನು ಮನೆ ಹಿಂಬದಿ ಡಬ್ಬಿಯೊಂದರಲ್ಲಿ ಇಟ್ಟು ಹೋಗಿದ್ದರು. ಸಂಜೆ ಮನೆಗೆ ಮರಳಿ ಬಂದು ನೋಡುವಾಗ ಡಬ್ಬಿಯಲ್ಲಿ ಕೀ ಇರಲಿಲ್ಲ. ಸ್ಕ್ರೂ ಡ್ರೈವರ್‍ನಿಂದ ಬಾಗಿಲು ತೆಗೆದು ಒಳ ಹೋಗಿ ನೋಡಿದಾಗ ಬೀರುವಿನ ಬಾಗಿಲು ತೆರೆದಿದ್ದು, ಇಟ್ಟಿದ್ದ 2 ಜತೆ ಚಿನ್ನದ ಓಲೆಗಳು, 1 ಜತೆ ಮಾಟಿ, 1 ಜತೆ ಜುಮುಕಿ 8 ಗ್ರಾಂ, 1 ಉಂಗುರ, 1 ಜತೆ ಓಲೆ ಒಟ್ಟು 30 ಗ್ರಾಂ ಹಾಗೂ ನಗದು ಕಳವು ಮಾಡಲಾಗಿದೆ ಎಂದು ಪ್ರಕಾಶ್ ದೂರಿನಲ್ಲಿ ತಿಳಿಸಿದ್ದಾರೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.