ಮಡಿಕೇರಿ, ಜೂ. 4: ರೋಗಿಗಳಿಗೆ ಪ್ರಾಣಾಪಾಯದ ಸಂದರ್ಭ ಅತ್ಯಗತ್ಯವಾದಂತಹ ರಕ್ತವನ್ನು ದಾನ ಮಾಡುವದು ಪುಣ್ಯದ ಕೆಲಸವಾಗಿದೆ ಎಂದು ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್ ಅಭಿಪ್ರಾಯಪಟ್ಟರು.

ನಿನ್ನೆದಿನ ಅಶ್ವಿನಿ ಆಸ್ಪತ್ರೆಯಲ್ಲಿ ನವೋದಯ ವಿದ್ಯಾಲಯ ಅಲ್ಯುಮುನಿ ಸಂಸ್ಥೆಯಿಂದ ಏರ್ಪಟ್ಟಿದ್ದ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಅಲ್ಲದೆ ರಮೇಶ್ ಅವರು ಸ್ವತಃ ರಕ್ತದಾನ ಮಾಡಿದರು.