ಮಡಿಕೇರಿ, ಜೂ. 4: ಶ್ರೀಗಂಧದÀ ಮರದ ತುಂಡುಗಳನ್ನು ಅಕ್ರಮವಾಗಿ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.ಕಾಸರಗೋಡು ಜಿಲ್ಲೆಯ ಮುಳ್ಳೇರಿಯ ತಾಲೂಕಿನ ಕುಂಟಾರು ಗ್ರಾಮದ ನಿವಾಸಿ ಸಂಷುದ್ಧೀನ್ ಎಂಬಾತ ಇಂದು ಬೋಯಿಕೇರಿ ಬಸ್ ನಿಲ್ದಾಣದ ಬಳಿ ಒಂದು ಚೀಲದಲ್ಲಿ ಶ್ರೀಗಂಧದ ಮರದ ತುಂಡುಗಳನ್ನು ತುಂಬಿಕೊಂಡು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ಸಂದರ್ಭ ಧಾಳಿ ನಡೆಸಿದ ಪೊಲೀಸರು ಆರೋಪಿ ಸಂಷುದ್ಧೀನ್‍ನನ್ನು ಬಂಧಿಸಿ ಆತನಿಂದ 50 ಸಾವಿರ ರೂ. ಮೌಲ್ಯದ 10 ಕೆ.ಜಿ. ಯಷ್ಟು ತೂಕದ 28 ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಎಸ್ಪಿ ರಾಜೇಂದ್ರ ಪ್ರಸಾದ್ ನಿರ್ದೇಶನದಲ್ಲಿ ಡಿವೈಎಸ್‍ಪಿ ಸುಂದರರಾಜ್ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಸಿದ್ಧಯ್ಯ, ಪ್ರೊಬೇಷನರಿ ಎಸ್ಪಿ ಯತೀಶ್, ಉಪ ನಿರೀಕ್ಷಕ ಚೇತನ್, ಸಿಬ್ಬಂದಿಗಳಾದ ತೀರ್ಥಕುಮಾರ್, ಇಬ್ರಾಹೀಂ, ಸತೀಶ್, ಶಿವರಾಜೇಗೌಡ, ಸುಧಾಮಣಿ, ಚಾಲಕ ಅರುಣ್ ಇವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.