ವೀರಾಜಪೇಟೆ, ಜೂ. 5: ವೀರಾಜಪೇಟೆಯ ಹೆಗ್ಗಳದ ಬೂದಿಮಾಳದ ಬಿ.ಎಸ್. ಪ್ರವೀಣ್ ಎಂಬವರ ಮನೆಯ ಕುಡಿಯುವ ನೀರಿನ ಸಿಂಟೆಕ್ಸ್ ಟ್ಯಾಂಕ್‍ಗೆ ಯಾರೋ ದುಷ್ಕರ್ಮಿಗಳು ದ್ವೇಷ ಸಾಧನೆಯ ಸಲುವಾಗಿ ವಿಷವನ್ನು ಹಾಕಿದ್ದಾರೆ ಎಂದು ಪ್ರವೀಣ್ ಇಲ್ಲಿನ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನೀರಿಗೆ ವಿಷ ಹಾಕಿದ ನಂತರ ನೀರಿನ ಬಣ್ಣ ಬದಲಾವಣೆಗೊಂಡು ಬಿಳಿ ಮಿಶ್ರಿತವಾಗಿದೆ. ಸಂಶಯಗೊಂಡ ಮನೆಯ ಮಾಲೀಕರು ಇದನ್ನು ಪರಿಶೀಲಿಸಿದಾಗ ವಿಷ ಬೆರೆಸಿರುವದು ಗೊತ್ತಾದ ನಂತರ ಪೊಲೀಸರಿಗೆ ದೂರು ನೀಡಿದ್ದಾರೆ.