ಮಡಿಕೇರಿ, ಜೂ. 5: ಇತ್ತೀಚೆಗೆ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮಡಿಕೇರಿ ತಾಲೂಕಿಗೆ ಮಡಿಕೇರಿ ಸಂತ ಜೋಸೆಫರ ಶಾಲಾ ವಿದ್ಯಾರ್ಥಿನಿ ಚಂದನ ಪಿ.ಎಸ್. ದ್ವಿತೀಯ ಸ್ಥಾನ ಗಳಿಸಿದ್ದಾಳೆ. ಈ ಹಿಂದೆ ಪ್ರಕಟಗೊಂಡಿದ್ದ ಫಲಿತಾಂಶದಲ್ಲಿ ಚಂದನಳಿಗೆ 598 ಅಂಕ ಲಭ್ಯವಾಗಿತ್ತು. ಇದೀಗ ಮರು ಮೌಲ್ಯಮಾಪನ ಪರೀಕ್ಷೆಯಲ್ಲಿ ಆಕೆಗೆ ಹೆಚ್ಚುವರಿಯಾಗಿ ಮೂರು ಅಂಕ ದೊರೆತಿದ್ದು, 601 ಅಂಕದೊಂದಿಗೆ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಂತಾಗಿದೆ. ಚಂದನ ಮೂಡಾ ಮಾಜಿ ಅಧ್ಯಕ್ಷ ಶಜೀಲ್ ಕೃಷ್ಣ ಹಾಗೂ ಕಲಾ ದಂಪತಿಯ ಪುತ್ರಿ.