ಸುಂಟಿಕೊಪ್ಪ, ಜೂ. 3: ಗದೆಹಳ್ಳ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯನಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎ.ಪಿ. ಮೀನಾಕ್ಷಿ ಅವರು ವಯೋನಿವೃತ್ತಿಗೊಂಡಿದ್ದು, ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕರು ಬೀಳ್ಕೊಟ್ಟರು.
ಗದ್ದೆಹಳ್ಳ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಅವರು ಮೇ 31 ರಂದು ವಯೋನಿವೃತ್ತಿಗೊಂಡಿದ್ದು, ಅವರಿಗೆ ಶಾಲಾಭಿವೃದ್ಧಿ ಸಮಿತಿ ಹಾಗೂ ಸಹಶಿಕ್ಷಕರು ಶಾಲು ಹೊದಿಸಿ, ಫಲತಾಂಬೂಲ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ರೇಷ್ಮ ವಹಿಸಿದ್ದರು, ಸದಸ್ಯ ಪಿ.ಆರ್. ಸುಕುಮಾರ್, ಸಹಶಿಕ್ಷಕರಾದ ತಾರಮಣಿ, ಹೇಮಾವತಿ, ಎ.ಪಿ.ಶಾಂತಪ್ಪ, ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಶಾಲಾ ಮಕ್ಕಳು ಪ್ರಾರ್ಥಿಸಿ, ಶಿಕ್ಷಕಿ ಪುಷ್ಪಾವತಿ ಸ್ವಾಗತಿಸಿ, ಶೈಲಜ ವಂದಿಸಿದರು.