ಮಡಿಕೇರಿ, ಜೂ. 3: ರಾಜ್ಯ ಪೊಲೀಸ್ ಮಹಾ ನಿರ್ದೇಶರು ಹಾಗೂ ಆರಕ್ಷಕ ಮಹಾ ನಿರೀಕ್ಷಕರಾಗಿರುವ ನೀಲಮಣಿ ಎನ್. ರಾಜು ಅವರು ಈ ಸಂಜೆ ಜಿಲ್ಲೆಯಿಂದ ರಾಜಧಾನಿ ಬೆಂಗಳೂರಿಗೆ ನಿರ್ಗಮಿಸಿದರು.ಜಿಲ್ಲಾ ಪೊಲೀಸ್ ಕೇಂದ್ರ ಕಚೇರಿಗೆ ಇಂದು ಅಧಿಕೃತ ಭೇಟಿ ನೀಡುವದರೊಂದಿಗೆ ಕುಂದು ಕೊರತೆಗಳನ್ನು ಖುದ್ದು ಪರಿಶೀಲಿಸಿದರು. ಅಲ್ಲದೆ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿಯಿಂದ ಮೊದಲುಗೊಂಡು ಪ್ರತಿಯೊಬ್ಬರು ಸಿಬ್ಬಂದಿ ಕೂಡ ಜನತೆಯ ನಡುವೆ ಇಲಾಖೆಯ ಗೌರವವನ್ನು ಹೆಚ್ಚಿಸುವ ದಿಸೆಯಲ್ಲಿ ಜನಮಿತ್ರರಂತೆ ಸಾರ್ವಜನಿಕ ಸಂಬಂಧ ಹೊಂದಿರಬೇಕೆಂದು ತಿಳಿ ಹೇಳಿದರು.ಜಿಲ್ಲಾ ಪೊಲೀಸ್ ಕಚೇರಿ, ಕಂಟ್ರೋಲ್ ರೂಂ, ಶ್ವಾನಘಟಕ, ಪೊಲೀಸ್ ಮೀಸಲು ಸಶಸ್ತ್ರ ದಳ ಸಹಿತ ಎಲ್ಲಾ ವಿಭಾಗಗಳಿಗೆ ಪ್ರತ್ಯಕ್ಷ ವೀಕ್ಷಣೆ ನಡೆಸಿ, ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು ಸಂಜೆ ರಾಜಧಾನಿ ಬೆಂಗಳೂರಿಗೆ ನಿರ್ಗಮಿಸಿದರು.