ಮಡಿಕೇರಿ, ಜೂ. 3: ತಾ. 23 ರಿಂದ ನೆದರ್‍ಲ್ಯಾಂಡ್‍ನ ಬ್ರೆಡಾದಲ್ಲಿ ಆರಂಭಗೊಳ್ಳಲಿರುವ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡದಲ್ಲಿ ಏಕೈಕ ಕನ್ನಡಿಗರಾಗಿ ಕೊಡಗಿನ ಎಸ್.ವಿ. ಸುನಿಲ್ ಅವರು ಸ್ಥಾನ ಪಡೆದಿದ್ದಾರೆ. ಪಿ.ಆರ್. ಶ್ರೀಜೇಶ್ ತಂಡದ ನಾಯಕರಾಗಿದ್ದು, ಭಾರತ ತಂಡ ತಾ. 23 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡಲಿದೆ.