ವೀರಾಜಪೇಟೆ, ಜೂ. 2: ಇತ್ತೀಚೆಗೆ ವೀರಾಜಪೇಟೆಯ ಅರಮೇರಿ ಶ್ರೀ ಕಳಂಚೇರಿ ಮಠದಲ್ಲಿ ನಡೆದ ಅಖಿಲ ಭಾರತ ವೀರಶೈವ ಸಭಾದ ವಾರ್ಷಿಕ ಮಹಾಸಭೆಯ ಸಂದರ್ಭ ಸಮಾಜದಲ್ಲಿ ವಿಶಿಷ್ಟ ಸಾಧನೆಗೈದವರನ್ನು ಸನ್ಮಾನಿಸಲಾಯಿತು.

ರಾಜ್ಯ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಎಸ್.ಎಸ್. ಶಿವಣ್ಣ, ಶ್ರೀಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎನ್. ಸಂದೀಪ್, ಅಮ್ಮತ್ತಿ ಗ್ರಾಮ ಪಂಚಾಯಿತಿ ಸದಸ್ಯ ವಿ.ಎನ್. ಸುರೇಶ್, ನಿವೃತ್ತ ಸೈನಿಕರಾದ ಎಸ್.ಜಿ. ಮರಿಸ್ವಾಮಿ, ಎಸ್.ಪಿ. ಮೋಹನ್ ಚಂದ್ರ, ಜೆ.ಎನ್. ಬಸವಣ್ಣ, ಶಿಕ್ಷಣ ಕ್ಷೇತ್ರದ ಸಾಧಕರಾದ ಡಿ.ಎನ್. ಉದ್ದಾನಪ್ಪ, ಎಂ.ಆರ್. ಪ್ರೇಮಕುಮಾರಿ, ಮೈಸೂರು ವಿಶ್ವವಿದ್ಯಾನಿಲಯದ ಚಿನ್ನದ ಪದಕ ವಿಜೇತೆ ಎಸ್.ಎಸ್. ಪಂಚಮ ಇವರು ಸನ್ಮಾನಿತರು. ಈ ಸಂದರ್ಭ ಮಠಾಧಿಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಗಾವಡಗೆರೆ ಮಠದ ಶ್ರೀ ನಟರಾಜ ಸ್ವಾಮೀಜಿ ಹಾಜರಿದ್ದರು.