ಮಡಿಕೇರಿ, ಜೂ. 2: ಕುಂಜಿಲ ಪಯ್ನರಿ ಮುಸ್ಲಿಂ ಜಮಾಅತ್ ಅಧೀನದಲ್ಲಿ ನಡೆಸಿಕೊಂಡು ಬರುತ್ತಿರುವ ಸ್ವಲಾತ್ ಮಜ್ಲಿಸ್ ತಾ. 3 ರಂದು (ಇಂದು) ಸಂಜೆ 6.30 ರಿಂದ ನಡೆಯಲಿದ್ದು, ಇಫ್ತಾರ್ ಕೂಟವನ್ನು ಪಯ್ನರಿ ದರ್ಗಾ ಆಡಿಟೋರಿಯಂನಲ್ಲಿ ಏರ್ಪಡಿಸಲಾಗಿದೆ.
ಸ್ವಲಾತ್ ಸಮಿತಿ ಸಕ್ರಿಯ ಕಾರ್ಯಕರ್ತನಾಗಿದ್ದ ಪುದರೇಲ್ ಅಶ್ರಫ್ (ಪೂವಿ) ಅವರ ಅಕಾಲಿಕ ಮರಣಕ್ಕೆ ಪ್ರತ್ಯೇಕ ದುಆ ಪ್ರಾರ್ಥನೆಯನ್ನು ನಡೆಸಲಾಗುವದು.
ಸ್ವಲಾತ್ ಹಾಗೂ ಪ್ರಾರ್ಥನೆಗೆ ಅಸ್ಸಯ್ಯಿದ್ ಮುಹ್ಸಿನ್ ಸೈದಲವಿಕೋಯ ಅಲ್ ಬುಖಾರಿ ನೇತೃತ್ವ ವಹಿಸಲಿದ್ದು, ಜಿಲ್ಲೆಯ ಹಲವಾರು ಉಲಮಾ - ಉಮರಾಗಳೂ ಪಾಲ್ಗೊಳ್ಳಲಿದ್ದಾರೆ.