ಮಡಿಕೇರಿ, ಮೇ 31: ಜೀವನದಿ ಕಾವೇರಿಗೆ ಗಂಗೆ, ಯಮುನೆ, ನರ್ಮದೆ ಯಂತೆ ಜೀವಂತ ವ್ಯಕ್ತಿಯ ಶಾಸನ ಹಕ್ಕು ಜಾರಿಯಾಗಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ತಲಕಾವೇರಿಯಿಂದ ಹಮ್ಮಿಕೊಂಡಿದ್ದ ವಾಹನ ಜಾಥಾ ತಮಿಳುನಾಡಿನ ಪೂಂಪ್‍ಹಾರ್ ತಲಪಿತು. ತಾ. 24 ರಿಂದ ಹೊರಟ ಜಾಥಾ ಕಾವೇರಿ ಬಂಗಾಳಕೊಲ್ಲಿಯಲ್ಲಿ ಸಂಗಮವಾಗುವ ಪೂಂಪ್‍ಹಾರ್ ತಲಪಿತು. ಸಂಗಮದಲ್ಲಿ ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಮಾತೆ ಕಾವೇರಿ, ಅಗಸ್ತ್ಯಮುನಿ, ಭೂಮಿ, ಸೂರ್ಯ, ಬಂಗಾಳಕೊಲ್ಲಿಯನ್ನು ಸ್ಮರಿಸುತ್ತಾ ಪ್ರಾರ್ಥಿಸಿದರು.
ಜಾಥಾದ ಮುಕ್ತಾಯ ಹಂತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ವಕೀಲ, ಕಾರೈಕಲ್ ಹೋರಾಟ ಸಮಿತಿ ನಾಯಕ ಸೆಲ್ವ ಷಣ್ಮುಗಂ, ರೈತ ಮುಖಂಡ ಅರುಪತಿ ಕಲ್ಯಾಣಂ, ತ್ಯಾಗರಾಜ ಪಂಡಿತರ್, ಪ್ರೊ. ವಿಶ್ವನಾಥ್, ಪ್ರೊ. ಮಣಿ, ನಲ್‍ವಿನಯ್ ಸೆಲ್ವಂ, ಪೆರಿಯಸ್ವಾಮಿ, ರೇಖಾ ನಾಚಪ್ಪ, ಸ್ವಾತಿ ಕಾಳಪ್ಪ, ಜನತ್ ಕುಮಾರ್, ಪಿ.ಎಸ್. ಕಾಳಪ್ಪ, ಮದ್ರಿರ ಕರುಂಬಯ್ಯ, ಜಿ.ಸಿ. ಮೋಹನ್, ಪಿ. ನಟೇಶ್, ಕೆ.ಕೆ. ಸುರೇಶ್, ಎ. ರಂಜನ್, ಎ. ಮಾಲೆ, ದಿನು ಬಿದ್ದಪ್ಪ, ಕೆ. ಶರಿನ್, ಪಿ. ನವೀನ್ ಇನ್ನಿತರರಿದ್ದರು.