ಕುಶಾಲನಗರ, ಮೇ 28: ಕುಶಾಲನಗರದಲ್ಲಿ ಸರಣಿ ಕಳ್ಳತನ ಪ್ರಾರಂಭಗೊಂಡಿದೆ. ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ 4 ಮನೆಗಳ ಬೀಗ ಮುರಿದು ಮನೆಯಲ್ಲಿದ್ದ ನಗದು, ಚಿನ್ನಾಭರಣ ಕಳವು ಮಾಡಲಾಗಿದೆ. ಭಾನುವಾರ ಸಂಜೆ ಈ ಘಟನೆ ನಡೆದಿದ್ದು ಇಲ್ಲಿನ ನಿವಾಸಿಗಳಾದ ಜಗದೀಶ್ ಪದ್ಮಾವತಿ, ಭಾಗ್ಯ, ಫಾರೂಕ್ ಎಂಬವರ ಮನೆಗಳಲ್ಲಿ ಯಾರೂ ಇಲ್ಲದ ಸಮಯ ಕಳವು ಪ್ರಕರಣಗಳು ನಡೆದಿದ್ದು ಅಲ್ಪಸ್ವಲ್ಪ ನಗದು, ಚಿನ್ನಾಭರಣ ಕಳವಾಗಿದೆ ಎಂದು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ನಡುವೆ ಇದೇ ವ್ಯಾಪ್ತಿಯಲ್ಲಿರುವ ಪೊಲೀಸ್ ಸಿಬ್ಬಂದಿಯೊಬ್ಬರ ಮನೆಗೆ ಕಳ್ಳರು ನುಗ್ಗಿದ ಬಗ್ಗೆ ತಿಳಿದುಬಂದಿದೆ. ಪೊಲೀಸರು ಕಳ್ಳರ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ.