ಗೋಣಿಕೊಪ್ಪಲು, ಮೇ 28: ಪೊನ್ನಂಪೇಟೆಯ ಎಂ.ಜಿ. ನಗರದಲ್ಲಿರುವ ಶ್ರೀ ಕನ್ನಂಬಾಡಿಯಮ್ಮ ದೇವಸ್ಥಾನದ ವಾರ್ಷಿಕ ಉತ್ಸವವು ತಾ. 29 ರಂದು (ಇಂದು) ನಡೆಯಲಿದೆ. ಬೆಳಿಗ್ಗೆ 11 ಗಂಟೆಯಿಂದ ಪೂಜೆ ಪ್ರಾರಂಭವಾಗಲಿದ್ದು ಉತ್ಸವ ಮೂರ್ತಿಯ ಗಂಗಾ ಸ್ಥಾನ ನಾನಾ ದೇವತೆಗಳ ದರ್ಶನದ ನಂತರ ಗ್ರಾಮ ದೇವತೆಯ ದೇವಸ್ಥಾನದ ಮುಂದೆ ಕೊಂಡ ಹಾಯುವದು ತೀರ್ಥ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.