ವೀರಾಜಪೇಟೆ, ಮೇ 29: ಮಲಬಾರ್ ರಸ್ತೆಯಲ್ಲಿರುವ ಶ್ರೀ ಕಂಚಿ ಕಾಮಾಕ್ಷಿ ದೇಗುಲದ ವಾರ್ಷಿಕ ಕರಗ ಆರಾಧನೆಯು ಮುಖ್ಯ ಬೀದಿಗಳಲ್ಲಿ ಕರಗಗಳ ಮೆರವಣಿಗೆಯೊಂದಿಗೆ ವಿಜೃಂಭಣೆಯಿಂದ ನಡೆಯಿತು.
ರಾತ್ರಿ ದೇವಾಲಯದ ಆವರಣದಲ್ಲಿ ರಂಗು ರಂಗಿನ ಸಿಡಿ ಮದ್ದುಗಳ ಪ್ರದರ್ಶನದೊಂದಿಗೆ ಶ್ರೀ ದೇವಿ ಕರಗಗಳನ್ನು ದೇವಾಲಯಕ್ಕೆ ಬರಮಾಡಿಕೊಳ್ಳಲಾಯಿತು. ಮಹಾಪೂಜೆ ಮತ್ತು ಪ್ರಸಾದ ವಿನಿಯೋಗ ನೆರವೇರಿತು. ಅನ್ನಸಂತರ್ಪಣೆ ಜರುಗಿತು. ಉತ್ಸವವ ಸಂದರ್ಭ ದೇಗುಲದ ಆಡಳಿತ ಮಂಡಳಿಯ ಜಿ.ಜಿ. ನಾರಾಯಣ ಸ್ವಾಮಿ, ಜಿ.ಜಿ. ಬಾಲಕೃಷ್ಣ, ಜಿ.ಜಿ. ಚಿನ್ನಯ್ಯ, ಜಿ.ಜಿ. ಮೋಹನ್ ಕುಮಾರ್ ಮತ್ತು ಕಾರ್ಯಕಾರಿ ಸದಸ್ಯರು ಇದ್ದರು.