ಮಡಿಕೇರಿ, ಮೇ 26 : ರಾಜ್ಯ ವಿಪಕ್ಷ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಸೋಮವಾರ ಕರ್ನಾಟಕ ಬಂದ್‍ಗೆ ಕರೆ ನೀಡಿದ್ದು, ಇಂದಿನ ವಿದ್ಯಮಾನಗಳು, ರಾಜಕೀಯ ಚಿಂತನೆಗಳು ಮತ್ತು ಸಾಮಾಜಿಕ ವ್ಯವಸ್ಥೆಗಳನ್ನು ಅವಲೋಕಿಸಿದಾಗ ಬಂದ್ ಅನಿವಾರ್ಯ ಹಾಗೂ ಬಂದ್‍ನ ಪರಿಮಿತಿ ದೇಶ ವ್ಯಾಪಿ ವಿಸ್ತರಣೆಯಾಗುವ ಅಗತ್ಯವಿದೆ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕರಾದ ತೆನ್ನಿರಾ ಮೈನಾ ಹೇಳಿದ್ದಾರೆ.

ದೇಶದ ಜೀವನಾಡಿಯಾಗಿರುವ ರೈತರ ಸಾಲಮನ್ನಾದ ಬದಲು ಉದ್ಯಮಿಗಳ ಕೋಟ್ಯಾಂತರ ರೂ. ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ ಎಂದು ಆರೋಪಿಸಿರುವ ಮೈನಾ ರೈತರ ಬಗ್ಗೆ ಕಾಳಜಿ ಇಲ್ಲದ ಕೇಂದ್ರ ಸರ್ಕಾರದ ವಿರುದ್ಧ ಭಾರತ್ ಬಂದ್ ಆಗಬೇಕೆ ಹೊರತು ಹೊಸ ಭರವಸೆಯನ್ನು ಮೂಡಿಸಿರುವ ಮೈತ್ರಿ ಸರ್ಕಾರದ ವಿರುದ್ಧ ಅಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.