ತೊರೆನೂರು ಗ್ರಾಮದ ಕೃಷಿಕರಾದ ಟಿ.ಕೆ. ಚನ್ನಬಸಪ್ಪ (ಸೋಮಪ್ಪ-78) ಅವರು ತಾ. 26 ರಂದು ಗ್ರಾಮದ ಅರೆಗಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು. ಮೃತರು ಪತ್ನಿ ಹಾಗೂ ಐವರು ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ತಾ. 27 ರಂದು (ಇಂದು) ಸ್ವಗ್ರಾಮದಲ್ಲಿ ನಡೆಯಲಿದೆ.

ಟಬೇಟೋಳಿ ಗ್ರಾಮದ ಪಟ್ಟಡ ದಿ. ಮೊಣ್ಣಯ್ಯ ಅವರ ಪತ್ನಿ, ನಿವೃತ್ತ ಶಿಕ್ಷಕಿ ಪಟ್ಟಡ ಗುಬ್ಬಿ ಮೊಣ್ಣಯ್ಯ (ಕುಟ್ಟಮ್ಮ ಟೀಚರ್-84) ಅವರು ತಾ. 25 ರಂದು ಬೆಂಗಳೂರಿನಲ್ಲಿ ನಿಧನ ಹೊಂದಿದರು. ಮೃತರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.