ಬೆಂಗಳೂರು, ಮೇ 25: ಮೇ. 23 ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಹೆಚ್. ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಶುಕ್ರವಾರದÀಂದು ವಿಶ್ವಾಸ ಮತ ಸಾಬೀತುಪಡಿಸಿದ್ದಾರೆ. ಬಳಿಕ ಸ್ಪೀಕರ್ ರಮೇಶ್ ಕುಮಾರ್ ಅವರು ವಿಶ್ವಾಸಮತ ಪ್ರಸ್ತಾವನೆಯನ್ನು ಮತಕ್ಕೆ ಹಾಕಿದರು. ಈ ವೇಳೆ ಸದನದಲ್ಲಿದ್ದ ಕಾಂಗ್ರೆಸ್ ಜೆಡಿಎಸ್ ನ 116 ಸದಸ್ಯರು ಕುಮಾರಸ್ವಾಮಿ ಸರ್ಕಾರದ ಪರವಾಗಿ ಮತಚಲಾಯಿಸಿದರು. ಇದಕ್ಕೂ ಮುನ್ನ ಭಾಷಣ ಮಾಡಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಭಾಷಣ ಮುಕ್ತಾಯಗೊಳಿಸುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಕುಮಾರಸ್ವಾಮಿ ಅವರು ಬಹುಮತ ಸಾಬೀತುಪಡಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಕನಿಷ್ಟ 6 ತಿಂಗಳುಗಳ ಕಾಲ ಸುಭದ್ರವಾಗಿರಲಿದ್ದು, ಶೀಘ್ರವೇ ಸಂಪುಟ ರಚನೆಯಾಗಲಿದೆ.

5 ವರ್ಷ ಸ್ಥಿರವಾಗಿರಲಿದೆ: ಕುಮಾರಸ್ವಾಮಿಕಾಂಗ್ರೆಸ್ - ಜೆಡಿಎಸ್ ಸರ್ಕಾರ ಐದು ವರ್ಷ ಸ್ಥಿರವಾಗಿರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.

ಇಂದು ಮೊದಲಿಗೆ ವಿಶ್ವಾಸಮತ ಯಾಚನೆ ಪ್ರಸ್ತಾಪ ಮಂಡಿಸಿ ವಿರೋಧ ಪಕ್ಷದ ಸದಸ್ಯರೂ ಹಾಜರಿದ್ದ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ರಾಜ್ಯದ ಜನ ನನಗೆ ಸಂಪೂರ್ಣ ಬಹುಮತ ನೀಡದಿರುವ ಬಗ್ಗೆ ನನಗೂ ನೋವಿದೆ. ಆದರೂ ನಾವು ಸ್ಥಿರ ಸರ್ಕಾರ ನೀಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾವು ಜನರಿಗಾಗಿ ಕೆಲಸ ಮಾಡುತ್ತೇವೆ. ನಮ್ಮ ಸ್ವಹಿತಾಸಕ್ತಿಗಾಗಿ ಕೆಲಸ ಮಾಡುವುದಿಲ್ಲ. ನಾನಾಗಲಿ, ನಮ್ಮ ಕುಟುಂಬದವರಾಗಲಿ ಅಧಿಕಾರಕ್ಕೆ ಆಸೆ ಪಟ್ಟವರಲ್ಲ, ದೇವೇಗೌಡರು ಪ್ರಧಾನಿ ಹುದ್ದೆಯಿಂದ ಕೆಳಗಿಳಿದಾಗ ವಾಜಪೇಯಿ ಅವರು ಬೆಂಬಲ ನೀಡುವದಾಗಿ ಒಂದು ಚೀಟಿ ಕಳುಹಿಸಿದ್ದರು. ಆದರೆ ನನ್ನ ತಂದೆಯವರು ಬಿಜೆಪಿ ಜೊತೆ ಹೋಗಲ್ಲ ಎಂದು ಹೇಳಿದರು, ಕಾಂಗ್ರೆಸ್ ಪಕ್ಷದ

(ಮೊದಲ ಪುಟದಿಂದ) ನೆರವಿನಿಂದ ನನ್ನ ತಂದೆ ಪ್ರಧಾನಿಯಾದರು, ಇಂದು ನಾನು ಮುಖ್ಯಮಂತ್ರಿಯಾದೆ ಎಂದರು.

ಇದೇ ವೇಳೆ 2006ರಲ್ಲಿ ಬಿಜೆಪಿ ಜೊತೆ ಸರ್ಕಾರ ರಚಿಸಿದ್ದÀನ್ನು ನೆನಪಿಸಿಕೊಂಡ ಕುಮಾರಸ್ವಾಮಿ, ಬಿಜೆಪಿಗೆ ಅಧಿಕಾರ ನೀಡದಿದ್ದಕ್ಕೆ ವಚನ ಭ್ರಷ್ಟ ಎಂಬ ಹಣೆಪಟ್ಟಿ ಕಟ್ಟಿದ್ದರು, ನಾನು ಖಂಡಿತವಾಗಿಯೂ ವಚನ ಭ್ರಷ್ಟ ಅಲ್ಲ, ಅಂದಿನ ಪರಿಸ್ಥಿತಿ, ಪಕ್ಷವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯ ಇತ್ತು ಎಂದರು. ವಿಶ್ವಾಸಮತಯಾಚನೆ ನಿರ್ಣಯ ಮಂಡನೆ ಮಾಡಿದ ಬಳಿಕ ಮಾತನಾಡಿದ ಕುಮಾರಸ್ವಾಮಿ ಅವರು, 'ರೈತರ ಸಾಲಮನ್ನಾ ಬಗ್ಗೆ ಬಿಜೆಪಿಯಿಂದ ಕಲಿಯಬೇಕಿಲ್ಲ. ಈಗ ಯಡಿಯೂರಪ್ಪ ರೈತರ ಸಾಲಮನ್ನಾ ಬಗ್ಗೆ ಮಾತನಾಡುತ್ತಾರೆ. ಆದರೆ, 2010ರಲ್ಲಿ ಯಡಿಯೂರಪ್ಪ ಅವರು ಸಾಲಮನ್ನಾಕ್ಕೆ ಹಣವಿಲ್ಲ ಎಂದಿದ್ದರು' ಎಂದರು . ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡುವ ವೇಳೆ ಮಾತನಾಡಿರುವ ಹೆಚ್ ಡಿ ಕುಮಾರಸ್ವಾಮಿ ತಮ್ಮ ಸುದೀರ್ಘ ಭಾಷಣದಲ್ಲಿ ಮುಖ್ಯಮಂತ್ರಿಯಾಗಿ ತಾವು ಈ ಹಿಂದೆ ನಡೆಸಿದ್ದ ಆಡಳಿತವನ್ನು ನೆನಪಿಸಿಕೊಂಡಿದ್ದಾರೆ. ಇದೇ ವೇಳೆ ಬಿಜೆಪಿ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯನ್ನೂ ಸ್ಮರಿಸಿದÀ ಹೆಚ್‍ಡಿಕೆ, ತಾವು ರಾಜ್ಯದ ಜನತೆಯ ನೋವುಗಳಿಗೆ ಸ್ಪಂದಿಸಲು ಬೆಳಿಗ್ಗೆ 9 ರಿಂದ ರಾತ್ರಿ 1 ಗಂಟೆ ವೇಳೆ ವರೆಗೂ ಕಾರ್ಯನಿರ್ವಹಿಸುತ್ತಿದ್ದೆ. ಜೆಡಿಎಸ್ ಬಿಜೆಪಿಯೊಂದಿಗೆ ಸರ್ಕಾರ ನಡೆಸಿದ್ದು ನಮ್ಮ ತಂದೆಯವರಿಗೆ ಇಷ್ಟವಿರಲಿಲ್ಲ. ಅಧಿಕಾರ ನೀಡದಿದ್ದಕ್ಕೆ ವಚನ ಭ್ರಷ್ಟ ಎಂಬ ಹಣೆಪಟ್ಟಿ ಕಟ್ಟಿದ್ದರು, ನಾನು ಖಂಡಿತವಾಗಿಯೂ ವಚನ ಭ್ರಷ್ಟ ಅಲ್ಲ, ಅಂದಿನ ಪರಿಸ್ಥಿತಿ, ಪಕ್ಷವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯ ಇತ್ತು ಎಂದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿರುವದರಿಂದ ನಾನು ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುವದಕ್ಕೆ ಸಾಧ್ಯವಿಲ್ಲ, ರೈತರ ಸಾಲ ಮನ್ನಾ ಸೇರಿದಂತೆ ಕಾಂಗ್ರೆಸ್‍ನೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ. ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವದಾಗಿ ಯಡಿಯೂರಪ್ಪ ಎಚ್ಚರಿಸಿದ್ದರು, ಯಡಿಯೂರಪ್ಪನವರು ಕಳೆದ ಎರಡು ವರ್ಷಗಳಿಂದ ರಾಜ್ಯ ಪ್ರವಾಸ ಮಾಡಿ ಶ್ರಮಿಸಿದ್ದಾರೆ, ನಾವು ಮನೆಯಲ್ಲಿ ಕುಳಿತು ಅಧಿಕಾರಕ್ಕೆ ಬಂದಿದ್ದೀವಿ ಎಂದು ವ್ಯಂಗ್ಯವಾಗಿ ಮಾತನಾಡಿರುವ ಹೆಚ್ ಡಿ ಕುಮಾರಸ್ವಾಮಿ, ಯಡಿಯೂರಪ್ಪನವರ ಆರೋಗ್ಯ ಚೆನ್ನಾಗಿರಬೇಕು, ಅವರು ಕಳೆದ 2 ವರ್ಷಗಳಲ್ಲಿ ರಾಜ್ಯ ಪ್ರವಾಸ ಮಾಡಿರುವಾಗ ಕಂಡಿರುವ ಜನರ ಸಮಸ್ಯೆಗಳ ಬಗ್ಗೆ ನಮ್ಮ ಸರ್ಕಾರಕ್ಕೆ ಮಾಹಿತಿ ನೀಡಿ ಸಹಕಾರ ನೀಡಲಿ, ಅವರು ಪ್ರತಿಭಟನೆ ನಡೆಸುವದಕ್ಕೆ ಅವಕಾಶವೇ ಸಿಗದಂತೆ ನಾನು ಆಡಳಿತ ನಡೆಸುತ್ತೇನೆ ಎಂದು ಹೆಚ್ ಡಿಕೆ ಹೇಳಿದ್ದಾರೆ. ವಿಶ್ವಾಸಮತ ಯಾಚನೆಗೂ ಮೊದಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸಮತ ನಿರ್ಣಯ ಮಂಡಿಸಿ ಒಂದು ಗಂಟೆಗೂ ಹೆಚ್ಚು ಕಾಲ ಭಾಷಣ ಮಾಡಿದರು.

ಯಡಿಯೂರಪ್ಪ ಅವರು ಬಿಜೆಪಿ ಸದಸ್ಯರೊಂದಿಗೆ ಸದನದಿಂದ ಹೊರ ಹೋದ ಬಳಿಕ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು ಈ ರೀತಿಯ ಪಲಾಯನವಾದ ಅವರ ಗೌರವ- ಘನತೆಯನ್ನು ಕಡಿಮೆ ಮಾಡಿದೆ ಎಂದು ಟೀಕಿಸಿದರು. ತಮ್ಮ ಕುಟುಂಬದ ಬಗ್ಗೆ ಅವರು ಹೊರಿಸಿದ ಆರೋಪಗಳಿಗೆ ಉತ್ತರಿಸಲೂ ಅವಕಾಶವಿಲ್ಲದಂತೆ ಸದನದ ಗೌರವಕ್ಕೆ ಧಕ್ಕೆÉ ಬರುವಂತೆ ನಡೆದುಕೊಂಡಿದ್ದಾರೆ ಎಂದು ಹೆಚ್‍ಡಿಕೆ ಟೀಕಿಸಿದರು. ಬಳಿಕ ಅವರು ಕಾಂಗ್ರೆಸ್- ಜೆಡಿ ಎಸ್ ಶಾಸಕರು ಮಾತ್ರವಿದ್ದ ಸದನದಲ್ಲಿ ವಿಶ್ವಾಸ ಮತ ಯಾಚಿಸಿ ವಿಜಯ ಸಾಧಿಸಿದರು.

ಬೆದರಿಕೆಗೆಲ್ಲ ಬಗ್ಗಲ್ಲ: ಕುಮಾರಸ್ವಾಮಿ

ಭಾರತೀಯ ಜನತಾ ಪಕ್ಷದ ಬಂದ್ ಬೆದರಿಕೆಗಳಿಗೆಲ್ಲ ಬಗ್ಗುವದಿಲ್ಲ ಎಂದು ವಿಶ್ವಾಸ ಮತ ಗೆದ್ದ ನೂತನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗುಡುಗಿದ್ದಾರೆ. ಸದನದಲ್ಲಿ ವಿಶ್ವಾಸ ಮತ ಗೆದ್ದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, "ನಿಜವಾದ ಕೆಲಸ ಈಗ ಆರಂಭವಾಗುತ್ತದೆ. ಕರ್ನಾಟಕದ ಜನತೆಗೆ ನಾನು ಏನೆಲ್ಲಾ ಭರವಸೆಗಳನ್ನು ನೀಡಿದ್ದೆನೋ ಅದನ್ನೆಲ್ಲಾ ಈಡೇರಿಸುತ್ತೇನೆ," ಎಂದು ಭರವಸೆ ನೀಡಿದ್ದಾರೆ.

ಬಂದ್ ಮಾಡಲು ಬಿಡೆವು: ಡಿಕೆಶಿ

ಬಿಜೆಪಿಯು ಕರ್ನಾಟಕ ಬಂದ್ ಮಾಡಲು ನಾವು ಬಿಡುವುದಿಲ್ಲ, ಅದು ಅಸಾಂವಿಧಾನಿಕ ಎಂದು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ವಿಧಾನಸಭೆ ಕಲಾಪದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಬಂದ್ ಮಾಡುವ ಮೂಲಕ ಸಾರ್ವಜನಿಕ ಹಣವನ್ನು ಪೋಲು ಮಾಡಲು ಸಾಧ್ಯವಿಲ್ಲ, ಇದಕ್ಕೆ ಸರ್ಕಾರ ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ. ಬಿಜೆಪಿಯ ಬಂದ್‍ನಿಂದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಉಂಟಾದರೆ ಅದಕ್ಕೆ ಅವರೇ ಕಾರಣಕರ್ತರಾಗುತ್ತಾರೆ. ಅವರು ಹೀಗೆ ಸರ್ಕಾರದ ಮೇಲೆ ಒತ್ತಡ ಅಥವಾ ಹೆದರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ನಮ್ಮದು ಜವಾಬ್ದಾರಿಯುತ ಸರ್ಕಾರ, ವಿವೇಚನೆಯಿಂದ ನಾವು ಯೋಜನೆಗಳನ್ನು ಜಾರಿ ಮಾಡುತ್ತೇವೆ. ಬಿಜೆಪಿಯವರು ಹೇಳಿದ ತಾಳಕ್ಕೆ ಕುಣಿಯಲು ಸಾಧ್ಯವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.