ಮಡಿಕೇರಿ, ಮೇ 25: ಮೂರ್ನಾಡಿನ ಸುಬಾಶ್‍ನಗರದಲ್ಲಿ ನಡೆದ ಮನೆ ಕಳವು ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ಅವರ ತಂಡ ಯಶಸ್ವಿಯಾಗಿದ್ದಾರೆ. ತಾ. 20ರಂದು ಕಳವಾಗಿದ್ದದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 175/2018 ಕಲಂ 454, 380 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ ಮಡಿಕೇರಿ ವೃತ್ತ ನಿರೀಕ್ಷಕರು ಹಾಗೂ ಅವರ ತಂಡ ಮಾಹಿತಿಯನ್ನು ಕಲೆ ಹಾಕಿದಾಗ ಪಿರ್ಯಾದುದಾರ ವೆಂಕಟರಮಣ ಭಟ್ ಅವರÀ ಸಾಕು ಮಗಳಾದ PೃÀಪಾಶ್ರೀಯ ಬU್ಗÉ ಅನುಮಾನ ಮೂಡಿದ್ದು, ತಾ. 23ರಂದು ಆಕೆ ವಿಚಾರಣೆಗೊಳಪಡಿಸಲಾಗಿ ವೆಂಕಟರಮಣ ಭಟ್ ಅವರು ತಮ್ಮ ಮನೆಯಿಂದ ಹೋಗಿದ್ದನ್ನು ಗಮನಿಸಿ ಮನೆಯ ಬಗ್ಗೆ ಸಂಪೂರ್ಣ ತಿಳಿದಿದ್ದ ಆಕೆ ಮನೆಯ ಹಿಂಬಾಗಿಲಿನ ಚಿಲಕವನ್ನು ಮುರಿದು ಒಳಪ್ರವೇಶಿಸಿ ಚಿನ್ನದ ಒಡವೆಗಳನ್ನು ಕಳವು ಮಾಡಿರುವ ಬಗ್ಗೆ ತಪ್ಪೊಪ್ಪಿ ಕೊಂಡಿರುತ್ತಾಳೆ.
ಆರೋಪಿತಳಿಂದ ಕಳುವಾದ ಸಂಪೂರ್ಣ 114 ಗ್ರಾಂ ಚಿನ್ನದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ ಕಳವು ಮಾಲಿನ ಮೌಲ್ಯ 3,64,000 ರೂ.ಗಳಾರುತ್ತದೆ. ಪೊಲೀಸ್ ಅಧೀಕ್ಷಕ ರಾಜೇಂದ್ರ ಪ್ರಸಾದ್ ನಿರ್ದೇಶನದಲ್ಲಿ ಮಡಿಕೇರಿ ಉಪವಿಭಾಗದ ಉಪಾಧೀಕ್ಷಕ ಕೆ.ಎಸ್.ಸುಂದರ್ ರಾಜ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಸಿದ್ದಯ್ಯ ಅವರುಗಳ ನೇತೃತ್ವದಲ್ಲಿ ಹಾಗೂ ಮಡಿಕೇರಿ ಗ್ರಾಮಾಂತರ ಠಾಣಾ ಠಾಣಾಧಿಕಾರಿ ಯತೀಶ್ ಎನ್., ವಿ.ಚೇತನ್, ಸಿಬ್ಬಂದಿಗಳಾದ ಇಬ್ರಾಹಿಂ, ಚಂದ್ರಶೇಖರ್, ಇಟ್ನಾಳ್, ಮಂಜುನಾಥ್, ಕಾಳಿಯಪ್ಪ, ವೀಣಾ, ರಾಧ, ಚಾಲಕರುಗಳಾದ ಸುನಿಲ್, ಮನೋಹರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.