ಮಡಿಕೇರಿ, ಮೇ 24: ಭಾರತೀಯ ವಿದ್ಯಾಭವನ ಕೊಡಗು ಕೇಂದ್ರ ಮತ್ತು ಚೆನೈನ ನಾಟ್ಯ ಸಮರ್ಪಣಂ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ತಾ. 26 ರಂದು ಮಡಿಕೇರಿಯ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಸಂಕರ್ಷಣಾ ಎಂಬ ನೃತ್ಯ ರೂಪಕ ಆಯೋಜಿತವಾಗಿದೆ.

ಅಂದು ಸಂಜೆ 6 ಗಂಟೆಗೆ ಮಡಿಕೇರಿಯ ಓಂಕಾರೇಶ್ವರ ದೇವಾಲಯ ಬಳಿಯಲ್ಲಿನ ಭಾರತೀಯ ವಿದ್ಯಾಭವನ ಸಭಾಂಗಣ ದಲ್ಲಿ ಆಯೋಜಿತ ಸಂಕರ್ಷಣಾ ಕಾರ್ಯಕ್ರಮದಲ್ಲಿ ಭಾಗವತ ಆಧಾರಿತ ಶಾಸ್ತ್ರೀಯ ನೃತ್ಯ ರೂಪಕ ಸಂಕರ್ಷಣಾ ಪ್ರದರ್ಶಿತಗೊಳ್ಳಲಿದೆ.

ಮಡಿಕೇರಿಯ ಹಿರಿಯ ಸಂಗೀತ ಶಿಕ್ಷಕಿ, ವಿದೂಷಿ ಎಂ. ಜಯಲಕ್ಷ್ಮಿ ಮತ್ತು ನಿವೃತ್ತ ಶಿಕ್ಷಕ ಎಂ.ಕೆ. ರಮೇಶ್ ಅವರ ಪುತ್ರಿ ವಾಣಿಶ್ರೀ ರವಿಶಂಕರ್ ನಿರ್ದೇಶಕಿಯಾಗಿರುವ ಚೆನ್ಯೈನ ನಾಟ್ಯ ಸಮರ್ಪಣಂ ಸಂಸ್ಥೆಯಿಂದ ಪ್ರಸ್ತುತಗೊಳ್ಳುವ ಸಂಕರ್ಷಣಾ ನೃತ್ಯ ರೂಪಕದಲ್ಲಿ ಎನ್.ಕೆ. ಸಿಗ್ನ , ಸ್ಮøತಿ ಆನಂದ್, ಅಖಿತಾ ನರಸಿಂಹನ್, ಸಂಜಿತಾ ಶೇಖರ್, ಐಶ್ವರ್ಯ ಶಿವಕುಮಾರ್, ಮದುವಂತಿ ಮುಳಿಯ ಪಾಲ್ಗೊಳ್ಳಲಿದ್ದಾರೆ. ಹಿನ್ನಲೆ ಸಂಗೀತದಲ್ಲಿ ವಾಣಿಶ್ರೀ ರವಿಶಂಕರ್ (ನಟುವಾಂಗ), ವಿದ್ವಾನ್ ತ್ಯಾಗರಾಜನ್ (ಶಾಸ್ತ್ರೀಯ ಗಾಯನ), ವಿದ್ವಾನ್ ಆರ್. ಕಾರ್ತಿಕೇಯನ್ (ಮೃದಂಗ), ವಿದ್ವಾನ್ ಜಿ.ಆರ್. ಮೂರ್ತಿ (ವೀಣೆ), ಎ.ಜಿ. ವೆಂಕಟಸುಬ್ರಮಣ್ಯನ್ (ವಯೋಲಿನ್), ವಿದ್ವಾನ್ ಎಸ್. ರಾಜಾರಾಮ್ (ಕೊಳಲು), ವಿದೂಷಿ ಸುಮನಾ ಪ್ರಸಾದ್ (ಸಂಗೀತ ನಿರ್ದೇಶನ).

ಕಲಾ ಪ್ರೇಮಿಗಳಿಗೆ ಉಚಿತ ಪ್ರವೇಶವಿದೆ ಎಂದು ಭಾರತೀಯ ವಿದ್ಯಾಭವನ ಕೊಡಗು ಘಟಕದ ಕಾರ್ಯದರ್ಶಿ ಬಾಲಾಜಿ ಕಶ್ಯಪ್ ತಿಳಿಸಿದ್ದಾರೆ.