ಕೂಡಿಗೆ, ಮೇ 24: ಹುದುಗೂರು ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ 28ನೇ ವರ್ಷದ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ತಾ. 26 ರಂದು ಮಹಾ ಮೃತ್ಯುಂಜಯ ಯಜ್ಞ ನಡೆಸಲಾಗುತ್ತಿದೆ. ಅಂದು ಬೆಳಿಗ್ಗೆಯಿಂದಲೇ ಕಲಶ ಪೂಜೆ, ಗಣಪತಿ ಹೋಮ ನಂತರ ಮೃತ್ಯುಂಜಯ ಯಜ್ಞ ನಡೆಯಲಿದ್ದು, 12.30 ಕ್ಕೆ ಕಲಶಾಭಿಷೇಕ, ಅಲಂಕಾರ ಪೂಜೆ, ಮಹಾಮಂಗಳಾರತಿ ನಡೆಯಲಿವೆ.

ಯಜ್ಞದಲ್ಲಿ ಪಾಲ್ಗೊಳ್ಳುವ ಭಕ್ತಾಧಿಗಳು ಅಂದು ಬೆಳಿಗ್ಗೆ 11 ಗಂಟೆಯೊಳಗೆ ಕ್ಷೇತ್ರದಲ್ಲಿ 1001 ರೂ.ಗಳನ್ನು ಪಾವತಿಸಿ ರಶೀದಿ ಪಡೆದುಕೊಳ್ಳಬೇಕು. ಶ್ರೀ ಉಮಾಮಹೇಶ್ವರನ ಸೇವೆಗೆ ಮೊದಲ 365 ಭಕ್ತಾದಿಗಳಿಗೆ ಮಾತ್ರ ಅವಕಾಶವಿರುತ್ತದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಚಾಮಿ ತಿಳಿಸಿದ್ದಾರೆ.