ಮಡಿಕೇರಿ, ಮೇ 24: ಪೊನ್ನಂಪೇಟೆ ವಕೀಲರ ಸಂಘದ ಅಧ್ಯಕ್ಷ ಹಾಗೂ ಖಜಾಂಚಿ ಸ್ಥಾನಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ವಕೀಲರಾದ ಸುಳ್ಳಿಮಾಡ ಡಿ. ಕಾವೇರಪ್ಪ ಅವರು ಪುನರ್ ಆಯ್ಕೆಯಾಗಿದ್ದಾರೆ.

ಖಜಾಂಚಿ ಸ್ಥಾನಕ್ಕೆ ವಕೀಲ ಕೆ.ಬಿ. ಸಂಜೀವ, ಸಂಘದ ಕಾರ್ಯದರ್ಶಿಯಾಗಿ ಎಂ.ಜಿ. ರಾಕೇಶ್, ಉಪಾಧ್ಯಕ್ಷರಾಗಿ ಕೆ.ಡಿ. ಮುತ್ತಪ್ಪ ಆಯ್ಕೆಗೊಂಡಿದ್ದಾರೆ. ಸಹಕಾರ್ಯದರ್ಶಿಯಾಗಿ ಬಿ.ಆರ್. ವಿನೋದ್ ಹಾಗೂ ಸದಸ್ಯರುಗಳಾಗಿ ಎ.ಕೆ. ಮೋನಿ ಪೊನ್ನಪ್ಪ, ಎಂ.ಸಿ. ಪೂವಣ್ಣ, ಬಿ.ಎಂ. ಅಯ್ಯಪ್ಪ, ಬಿ.ಎಸ್. ಮುತ್ತಣ್ಣ, ಸಿ.ಬಿ. ಅನಿತ, ಕೆ.ಎಂ. ಭಾರತಿ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ ವಕೀಲ ಕೆ.ಪಿ. ಬೋಪಣ್ಣ ಕಾರ್ಯನಿರ್ವಹಿಸಿದ್ದರು.