ಮಡಿಕೇರಿ, ಮೇ 24: ಮಡಿಕೇರಿ 66/11ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ಕಾಮಗಾರಿ ನಡೆಯುತ್ತಿರುವದರಿಂದ ತಾ. 26 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವದು. ಮಡಿಕೇರಿ ಪಟ್ಟಣ ವ್ಯಾಪ್ತಿಯಲ್ಲಿ, ಹೆಬ್ಬೆಟ್ಟಗೇರಿ, ಬೋಯಿಕೇರಿ, ಮಕ್ಕಂದೂರು, ಮೂರನೇಮೈಲು, ಕರ್ಣಂಗೇರಿ, ಮುಕ್ಕೋಡ್ಲು, ಆವಂಡಿ, ಹಮ್ಮಿಯಾಲ, ಮೇಕೇರಿ, ಕಡಗದಾಳು, ಕಗ್ಗೋಡು, ಅರುವತೋಕ್ಲು, ಹಾಕತ್ತೂರು, ಭಾಗಮಂಡಲ, ಬೆಟ್ಟಗೇರಿ, ಮದೆನಾಡು, ಬೆಟ್ಟತ್ತೂರು, ಚೇರಂಬಾಣೆ, ಚೆಟ್ಟಿಮಾನಿ, ಐಯ್ಯಂಗೇರಿ, ಪಾಲೂರು, ಕುಂಡಾಮೇಸ್ತ್ರಿ ಕೂಟುಹೊಳೆ, ಸಂಪಾಜೆ, ಗಾಳಿಬೀಡು ಕಾಲೂರು ಮತ್ತು ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವದಿಲ್ಲ ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ಕೋರಿದ್ದಾರೆ.