ಮಡಿಕೇರಿ, ಮೇ 23: ಸ್ವಾಯತ್ತ ಕೊಡವ ಲ್ಯಾಂಡ್ ಪ್ರಮುಖ ಬೇಡಿಕೆಯನ್ನು ಮುಂದಿರಿಸಿಕೊಂಡು ನಿರಂತರ ಹೋರಾಟಗಳನ್ನು ರೂಪಿಸಿ ಕೊಂಡು ಬರುತ್ತಿರುವ ಕೊಡವ ಸಮುದಾಯದ ನಾಗರಿಕತೆ ಬೆಳೆದು ನಿಂತಿರುವದೇ ಕಾವೇರಿ ನದಿ ತಟದ ಕೊಡಗಿನಲ್ಲಿ. ಈ ಹಿನ್ನೆಲೆಯಲ್ಲಿ ಜೀವನದಿ ಕಾವೇರಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನವನ್ನು ನೀಡುವ ಮೂಲಕ ಅದನ್ನು ಸಂರಕ್ಷಿಸಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಸಂಘಟನೆ ವತಿಯಿಂದ ತಲಕಾವೇರಿ ಯಿಂದ ಪÀÇಂಪುಹಾರ್‍ವರೆಗೆ ತಾ. 24 (ಇಂದು)ರಿಂದ ವಾಹನ ಜಾಥಾ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ತಾ. 24ರಂದು ಬೆಳಿಗ್ಗೆ 7.30 ಗಂಟೆಗೆ ತಲಕಾವೇರಿ ಯಲ್ಲಿ ಕಾವೇರಿ ಸೇರಿದಂತೆ ಗಣಪತಿ, ಅಗಸ್ತ್ಯೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ವಾಹನ ಜಾಥ ಆರಂಭಗೊಳ್ಳಲಿದೆಯೆಂದು ಮಾಹಿತಿ ನೀಡಿದರು.

ತಲಕಾವೇರಿಯಿಂದ ಆರಂಭ ವಾಗಲಿರುವ ಜಾಥ ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳಾದ ಕೊಡಗು, ಮೈಸೂರು, ಮಂಡ್ಯ, ಧರ್ಮಪÀÅರಿ, ಸೇಲಂ, ಈರೋಡ್, ತಿರುಚರಾಪಳ್ಳಿ, ತಂಜಾವೂರು, ಶ್ರೀರಂಗಂ ಮೂಲಕ ಹಾದು ಅಂತಿಮ ವಾಗಿ ಕಾವೇರಿ ಮತ್ತು ಬಂಗಾಳಕೊಲ್ಲಿ ಸಂಗಮಿಸುವ ಪÀÇಂಪುಹಾರ್‍ನಲ್ಲಿ ಸಮಾರೋಪ ಗೊಳ್ಳಲಿದೆಯೆಂದು ತಿಳಿಸಿದರು.

ತಾ. 24 ರಂದು ಬೆಳಿಗ್ಗೆ ಹೊರಡುವ ಜಾಥ ನಾಪೋಕ್ಲು, ಅಯ್ಯಂಗೇರಿ, ನಾಪೋಕ್ಲು, ಬೆಟ್ಟಗೇರಿ ಮೂಲಕ ಮಡಿಕೇರಿಗೆ ಬೆಳಿಗ್ಗೆ 11.45 ಗಂಟೆಗೆ ಆಗಮಿಸಲಿದ್ದು, ಈ ಸಂದರ್ಭ ಜ.ತಿಮ್ಮಯ್ಯ ವೃತ್ತದ ಬಳಿ ಮಡಿಕೇರಿ ಕೊಡವ ಸಮಾಜ ಜಾಥವನ್ನು ಬರಮಾಡಿಕೊಳ್ಳಲಿದೆ. ಬಳಿಕ ಜಾಥ ಮೂರ್ನಾಡು, ಗೋಣಿಕೊಪ್ಪ, ಸಿದ್ದಾಪುರ, ಕುಶಾಲನಗರ ಮಾರ್ಗವಾಗಿ ಮೈಸೂರಿಗೆ ತೆರಳಲಿದೆ. ಮುಂದೆ ಹೊಗೇನಕಲ್ ಮೂಲಕ ತಾ. 26 ರಂದು ತಮಿಳುನಾಡನ್ನು ಪ್ರವೇಶಿಸಿ, ಕಾವೇರಿ ನದಿ ಪಾತ್ರದ ಜಿಲ್ಲೆಗಳನ್ನು ಹಾದು ತಾ. 30 ರಂದು ಕಾವೇರಿ ಬಂಗಾಳಕೊಲ್ಲಿಯನ್ನು ಸೇರುವ ಪÀÇಂಪುಹಾರ್‍ನಲ್ಲಿ ಸಾಗರ ಮತ್ತು ಕಾವೇರಿ ನದಿಗೆ ಪೂಜೆ ಸಲ್ಲಿಸುವ ಮೂಲಕ ಜಾಥ ಸಮಾರೋಪ ಗೊಳ್ಳಲಿದೆಯೆಂದು ತಿಳಿಸಿದರು.

ಜಾಥಾದ ಸಂದರ್ಭ ಸೇಲಂ- ರಾಸೀಪುರಂ, ತಿರುಚರಾಪಳ್ಳಿ, ತಂಜಾವುರ್, ಮೈಲಾರದುರೈಗಳಲ್ಲಿ ಸಾರ್ವಜನಿಕ ಸಭೆಗಳನ್ನು ಆಯೋಜಿಸಲಾಗುತ್ತದೆಂದು ನಾಚಪ್ಪ ಮಾಹಿತಿ ನೀಡಿದರು.

ಪ್ರಾಧಿಕಾರಕ್ಕೆ ಅಹವಾಲು: ಕರ್ನಾಟಕ ಮತ್ತು ತಮಿಳುನಾಡು ನಡುವಣ ಕಾವೇರಿ ನದಿ ನೀರು ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಇದೀಗ ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಪ್ರಾಧಿಕಾರ ರಚನೆಗೆ ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಜಾಥದ ಬಳಿಕ ಸಿಎನ್‍ಸಿ ಕಾವೇರಿ ನದಿ ನೀರಿಗೆ ಸಂಬಂಧಿಸಿದಂತೆ ಕೊಡಗಿನ ಪಾಲಿನ ಬಗ್ಗೆ ಕಾನೂನು ಬದ್ಧವಾಗಿ ತನ್ನ ಹಕ್ಕನ್ನು ಪ್ರತಿಪಾದಿಸುವ ಮತ್ತು ಅಹವಾಲು ಸಲ್ಲಿಸುವ ಕಾರ್ಯ ನಡೆಸಲಿದೆಯೆಂದು ನಾಚಪ್ಪ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಪುಲ್ಲೇರ ಕಾಳಪ್ಪ ಉಪಸ್ಥಿತರಿದ್ದರು.