ಗೋಣಿಕೊಪ್ಪ ವರದಿ, ಮೇ 24: ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಅಮೃತ ಮಹೋತ್ಸವ ಪ್ರಯುಕ್ತ ನಿರ್ಮಿಸಿರುವ ವಿವೇಕಾನಂದ ಆರೋಗ್ಯಧಾಮವನ್ನು ರಾಮಕೃಷ್ಣ ಮಿಷನ್ ಉಪಾಧ್ಯಕ್ಷ ಸುಹಿತನಂದಾಜಿ ಮಹರಾಜ್ ಲೋಕಾರ್ಪಣೆ ಗೊಳಿಸಿದರು.
ರಾಮಕೃಷ್ಣ ಸೇವಾಶ್ರಮದಲ್ಲಿ ನಿರ್ಮಿಸಿರುವ ಆರೋಗ್ಯಧಾಮದಲ್ಲಿನ ಕೊಕ್ಕೇಂಗಡ ಮೊಣ್ಣಪ್ಪ, ಪಾರ್ವತಿ ಸಂಕೀರ್ಣವನ್ನು ಸ್ವಾಮಿ ಬೋಧಸರಣಾನಂದಾಜಿ ಮಹರಾಜ್ ಉದ್ಘಾಟಿಸಿದರು.
ಬೆಳಿಗ್ಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಆರಂಭಿಸ ಲಾಯಿತು. ಆರೋಗ್ಯ ಧಾಮದಲ್ಲಿ ಸ್ಥಾಪಿಸಿರುವ ವಿವೇಕಾನಂದರ ಭಾವಚಿತ್ರಕ್ಕೆ ಆರತಿ ಎತ್ತುವ ಮೂಲಕ ಗೌರವ ನೀಡಲಾಯಿತು.
ನಂತರ ಶಾಂಭವನಂದಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಹಿರಿಯ ಸ್ವಾಮೀಜಿಗಳನ್ನು ಅಮೃತ ಮಹೋತ್ಸವ ಪ್ರಯುಕ್ತ ಸನ್ಮಾನಿ¸ Àಲಾಯಿತು. ಆರೋಗ್ಯಧಾಮ ನಿರ್ಮಾಣಕ್ಕೆ ರೂ. 46 ಲಕ್ಷ ಧನ ಸಹಾಯ ನೀಡಿದ ದಾನಿ ಕೊಕ್ಕೇಂಗಡ ಎಂ. ಕರುಂಬಯ್ಯ ಅವರನ್ನು ಗೌರವಿಸಲಾಯಿತು.
ಪೊನ್ನಂಪೇಟೆ ಸ್ವಾಮಿ ಬೋಧಶರಣಾನಂದಾಜಿ ಮಹರಾಜ್ ಮಾತನಾಡಿ, ಹಿರಿಯ ಸ್ವಾಮೀಜಿಗಳ ಶ್ರಮದಿಂದ ವಿವೇಕಾನಂದರ ಚಿಂತನೆ ರಾಮಕೃಷ್ಣ ಮಿಷನ್ ಮೂಲಕ ಜನರಿಗೆ ಸಿಗುವಂತಾಗಿದೆ. ಮಿಷನ್ ಸಾರ್ವಜನಿಕ ಸೇವೆಗೆ ತನ್ನನ್ನು ಮುಡಿಪಾಗಿಸಿಕೊಂಡಿದೆ. ಪ್ರಕೃತಿವಿಕೋಪ ಸಂದರ್ಭ ತಮ್ಮ ಸ್ಪಂದನ ಜನಸಾಮಾನ್ಯರಿಗೆ ತಾವು ನೀಡುವ ಗೌರವವಾಗಿದೆ ಎಂದರು.
ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಅಧ್ಯಕ್ಷ ಬೋಧಸ್ವರೂಪ ನಂದಾಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಆರೋಗ್ಯಧಾಮದಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗಕ್ಕೆ ಮಹತ್ವ ನೀಡಲಾಗುವದು. ಉತ್ತಮ ಕೊಠಡಿ ಹಾಗೂ ಮೂಲಭೂತ ವ್ಯವಸ್ಥೆಗಳು ಲಭ್ಯವಿದೆ. ಇನ್ನಷ್ಟು ಕಾಮಗಾರಿಗಳು ನಡೆಯಬೇಕಿರುವದರಿಂದ ದಾನಿಗಳ ಸಹಾಯವನ್ನು ನಿರೀಕ್ಷಿಸುತ್ತಿದ್ದೇವೆ. ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಕಲ್ಪಿಸಲು ಸಾರ್ವಜನಿಕರು ಕೂಡ ಆಶ್ರಮದೊಂದಿಗೆ ಕೈಜೋಡಿಸಬೇಕು ಎಂದರು.
ಈ ಸಂದರ್ಭ ಪೊನ್ನಂಪೇಟೆ ಸೇವಾಶ್ರಮ ವೈದ್ಯ ಡಾ. ಕಾರ್ಯಪ್ಪ, ಆಶ್ರಮದ ವಿಶ್ರಾಂತ ಸ್ವಾಮೀಜಿ ಜಗದಾತ್ಮಾನಂದಾಜಿ, ಊಟಿ ರಾಮಕೃಷ್ಣ ಮಠದ ಅಧ್ಯಕ್ಷ ರಾಘವೇಶಣನಂದಾಜಿ, ಲಕ್ನೋ ರಾಮಕೃಷ್ಣ ಮಠದ ಅಧ್ಯಕ್ಷ ಮುಕ್ತಿನಾಥನಂದಾಜಿ ಉಪಸ್ಥಿತರಿದ್ದರು.
ಹಿರಿಯ ವೈದ್ಯ ಡಾ. ಕಾಳಿಮಾಡ ಶಿವಪ್ಪ ಪ್ರಾರ್ಥಿಸಿದರು. ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಅಧ್ಯಕ್ಷ ಬೋಧಸ್ವರೂಪ ನಂದಾಜಿ ಸ್ವಾಗತಿಸಿದರು. ಕಳೆದೆರಡು ದಿನಗಳಿಂದ ನಡೆಯುತ್ತಿರುವ ಅಮೃತ ಮಹೋತ್ಸವದಲ್ಲಿ ದೇಶದ ವಿವಿಧ ಭಾಗಗಳಿಂದ ರಾಮಕೃಷ್ಣ ಶಾರದಾಶ್ರಮ ಮಿಷನ್ ಮತ್ತು ಮಠದಿಂದ ಸ್ವಾಮೀಜಿಗಳು ಪಾಲ್ಗೊಳ್ಳುವ ಮೂಲಕ ಪೊನ್ನಂಪೇಟೆ ಸಾಧುಗಳ ಕೇಂದ್ರವಾಗಿ ಮಾರ್ಪಟ್ಟಿದೆ.
ಇಂದಿನ ಕಾರ್ಯಕ್ರಮ
ಬೆಳಿಗ್ಗೆ 9.30 ರಿಂದ 3 ಗಂಟೆವರೆಗೆ ಮಲ್ಟಿಸ್ಪೆಷಾಲಿಟಿ ಫ್ರೀ ಮೆಡಿಕಲ್ ಕ್ಯಾಂಪ್ ನಡೆಯಲಿದೆ. ಅತಿಥಿಗಳಾಗಿ ವೀರಾಜಪೇಟೆ ದಂತ ವೈದ್ಯಕೀಯ ಕಾಲೇಜು ಮುಖ್ಯಸ್ಥ ಡಾ. ಪೊನ್ನಪ್ಪ ಭಾಗವಹಿಸಲಿದ್ದಾರೆ. ಈ ಸಂದರ್ಭ ಉತ್ತಮ ಆರೋಗ್ಯ ರಕ್ಷಣೆಯಲ್ಲಿನ ಉಪಯೋಗಿ ಅಂಶಗಳ ಬಗ್ಗೆ ವಿಚಾರ ಸಂಕಿರಣ ನಡೆಯಲಿದೆ. ಅತಿಥಿಗಳಾಗಿ ಮೈಸೂರು ಜೆಎಸ್ಎಸ್ ಕಾಲೇಜು ಮುಖ್ಯಸ್ಥ ಡಾ. ಬಸವಣ್ಣಗೌಡ, ಮಡಿಕೇರಿ ಕೊಡಗು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಪ್ರಬಾರ ಮುಖ್ಯಸ್ಥ ಡಾ ಕಾರ್ಯಪ್ಪ ಪಾಲ್ಗೊಳ್ಳಲಿದ್ದಾರೆ.